ಹಿರಿಯೂರು : ಉಳುವವನೇ ಭೂಮಿಯ ಒಡೆಯ, ರೈತರೇ ಭೂಮಿಯ ನಿಜವಾದ ಮಾಲೀಕರು ಆದರೆ ಸರ್ಕಾರ ಮಾತ್ರ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ನಮ್ಮ ಭೂಮಿಯ ಹಕ್ಕು ನಮಗೆ ಸಿಕ್ಕಿಲ್ಲದಿರುವುದು ದೇಶದ ದುರಂತವೇ ಸರಿ ಇನ್ನು ನಾವು ಸುಮ್ಮನಿರುವುದಿಲ್ಲ ಸರ್ಕಾರ ಈ ಕೂಡಲೇ ಭೂರಹಿತರಿಗೆ ಹಕ್ಕು ಪತ್ರ ವಿತರಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂಬುದಾಗಿ ಭೂ ಹಕ್ಕುದಾರರ ವೇದಿಕೆ ಅಧ್ಯಕ್ಷ ಹಾಗೂ ರೈತ ಮುಖಂಡ ಕಸವನಹಳ್ಳಿ ರಮೇಶ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಯಲ್ಲದಕೆರೆ ಗ್ರಾಮದಲ್ಲಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಮತ್ತು ಅರಣ್ಯ ಹಕ್ಕು ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭೂ ಹಕ್ಕಿಗಾಗಿ ಯಲ್ಲದಕೆರೆ ಗ್ರಾಮದಿಂದ ಹಾಗೂ ಹಿರಿಯೂರು ತಾಲ್ಲೂಕು ಕಛೇರಿವರಿನ ಸುಮಾರು 25 ಕಿ.ಮೀ. ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭೂಹಕ್ಕುದಾರರ ವೇದಿಕೆ ಜಿಲ್ಲಾ ಸಂಚಾಲಕ ರೂಪಾನಾಯ್ಕ್ ಮಾತನಾಡಿ, ಆಳುವ ಸರ್ಕಾರಗಳು ಬಂಡವಾಳಶಾಹಿಗಳೊಂದಿಗೆ ಶಾಮೀಲಾಗಿ ಕಾರ್ಪೋರೇಟ್ ಕಂಪನಿಗಳಿಗೆ, ಬಂಡವಾಳಶಾಹಿಗಳಿಗೆ ಸಾವಿರಾರೂ ಎಕರೆ ಭೂಮಿ ನೀಡುವುದನ್ನು ನಿಲ್ಲಿಸಿ, ಈ ದೇಶದ ಅನ್ನ ನೀಡುವ ರೈತನಿಗೆ ಭೂಮಿ ಹಕ್ಕುಗಳನ್ನು ಈ ಕೂಡಲೇ ನೀಡಬೇಕು ಎಂಬುದಾಗಿ ಆಗ್ರಹಿಸಿದರು.
ಈ ಬೃಹತ್ ಪಾದಯಾತ್ರೆ ಹೋರಾಟದಲ್ಲಿ ರೈತ ಸಂಘದ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ, ಹುಲಗಲಕುಂಟೆ ರಂಗಸ್ವಾಮಿ, ರವಿಕುಮಾರ್, ಯಲ್ಲದಕೆರೆ ಜಯಣ್ಣ, ಮೇಟಿಕುರ್ಕಿ ಶಶಿಕಲಾ, ಹುಲಗಲಕುಂಟೆ ತಿಮ್ಮಕ್ಕ, ದೊಡ್ಡಘಟ್ಟ ರಾಮಚಂದ್ರ, ಕಸವನಹಳ್ಳಿ ಜೈರಾಮ್, ಬಬ್ಬೂರ್ ಉಮೇಶ್, ವಿವಿ ಪುರ ಪ್ರೇಮನಾಥ್, ಗಿರಿಸ್ವಾಮಿ, ನರಸಿಂಹಯ್ಯ, ವಿಜಯಣ್ಣ, ದಾದಾಪೀರ್, ಹುಸೇನ್, ಲೋಕಮ್ಮ, ಹರ್ತಿಕೋಟೆ ಇತರರು ಪಾಲ್ಗೊಂಡಿದ್ದರು.