ಹಿರಿಯೂರು : ವಿವಿಧ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ 20 ರಂದು ಬೆಳಿಗ್ಗೆ ತಾಲೂಕು ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಹೇಳಿದರು. ಇಂದು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು ಶೇಂಗಾ ಬೆಲೆ ಸಂಪೂರ್ಣ ಕುಸಿದಿದ್ದು ಕೂಡಲೇ ಶೇಂಗಾ ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕು, ಹಿಂದೆ ಸರ್ಕಾರ ಬೀಜಗಳನ್ನು ರೈತರಿಗೆ ಕೊಡುವ ಸಂದರ್ಭದಲ್ಲಿ ಒಂದು ಕ್ವಿಂಟಲ್ ಶೇಂಗಾ ಕಾಯಿಗೆ 7500 ರಂತೆ ಮಾರಾಟವಾಗಿತ್ತು ಈಗ ಕೇವಲ 2000ಕ್ಕೆ ಮಾರಾಟವಾಗುವುದರಿಂದ ರೈತರಿಗೆ ತುಂಬಾ ಅನ್ಯಾಯವಾಗುತ್ತದೆ ಕೂಡಲೇ ಶೇಂಗಾ ಖರೀದಿ ಕೇಂದ್ರವನ್ನು ಸರ್ಕಾರ ಪ್ರಾರಂಭಿಸಬೇಕು ಹಾಗೂ ಮಳೆಯಿಂದ ಮತ್ತು ಕೊಳೆ ರೋಗದಿಂದ ಈರುಳ್ಳಿ ಬೆಳೆ ಸಂಪೂರ್ಣ ಹಾಳಾಗಿದ್ದು ಬೆಳೆ ನಷ್ಟ ಪರಿಹಾರವನ್ನು ಕೊಡಬೇಕು ಎಂದರು.
ಇನ್ನು ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಘೋಷಿಸಿರುವ ಬೆಳೆಪರಿಹಾರ ಹೂವು ಹಣ್ಣು ಹಾಗೂ ತರಕಾರಿ ಗಳಿಗೆ ಇನ್ನೂ ಅನೇಕ ರೈತರಿಗೆ ಪರಿಹಾರ ಬಂದಿರುವುದಿಲ್ಲ ಕೂಡಲೇ ಪರಿಹಾರ ಕೊಡಬೇಕು. ಭೂಮಿ ಸಾಗುವಳಿ ಮಾಡಿರುವ ರೈತರಿಗೆ ಕೂಡಲೇ ಸಾಗುವಳಿ ಪತ್ರ ಕೊಡಬೇಕು ಒಂದು ವೇಳೆ ಕೊಡದೆ ಹೋದರೆ ಎಲ್ಲ ರೈತರೊಂದಿಗೆ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ವಿವಿ ಸಾಗರದ ನೀರು ಧರ್ಮಪುರ ಕೆರೆಗೆ ತುಂಬಿಸುವ ಕಾಮಗಾರಿ ಯೋಜನೆಯನ್ನು ಅಧಿವೇಶನದಲ್ಲಿ ಮಂಜೂರಾತಿ ನೀಡಬೇಕು. ಆ ಭಾಗದ ರೈತರ ದಶಕಗಳ ಹೋರಾಟಕ್ಕೆ ನ್ಯಾಯ ದೊರಕಿಸಿಕೊಡಬೇಕು.
ಸರ್ಕಾರ ನಮ್ಮ ತಾಲೂಕಿಗೆ ಕೂಡಲೇ ಗ್ರಾಮೀಣ ಸಾರಿಗೆ ಮಂಜೂರು ಮಾಡಿ ಕಾರ್ಯ ಆರಂಭಿಸಬೇಕು ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು ಎಂದರು. ಈ ಸಭೆಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಕಾರ್ಯದರ್ಶಿ ಸಿದ್ದರಾಮಣ್ಣ, ಉಪಾಧ್ಯಕ್ಷ ತಿಮ್ಮಾರೆಡ್ಡಿ, ಅರಳಿಕೆರೆ ತಿಪ್ಪೇಸ್ವಾಮಿ, ಕಸವನಹಳ್ಳಿ ರಮೇಶ್, ಆಲೂರು ರಾಮಣ್ಣ , ಮಂಜಣ್ಣ, ಮಂಜುನಾಥ ನಾಯಕ್, ಶಿವಣ್ಣ, ಸಿದ್ದಪ್ಪ, ಶಶಿಕಲಾ, ತಿಮ್ಮಕ್ಕ ಸೇರಿದಂತೆ ಮತ್ತಿತರರು ಹಾಜರಿದ್ದರು.