ಹಿರಿಯೂರು : ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಕರವೇ ಕಾರ್ಯಕರ್ತರು ( ಪ್ರವೀಣ್ ಶೆಟ್ಟಿ ಬಣ) ನಗರದಲ್ಲಿ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.
ರಂಜಿತಾ ಹೋಟೆಲ್ ಪ್ರಾರಂಭವಾದ ಮೆರವಣಿಗೆ ಆಸ್ಪತ್ರೆ, ಗಾಂಧಿ ವೃತ್ತದಲ್ಲಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಈ ಕೂಡಲೇ “ಮರಾಠ
ಅಭಿವೃದ್ಧಿ ನಿಗಮ” ಘೋಷಿಸಿದ್ದು ಅದನ್ನು ಹಿಂಪಡೆಯುವಂತೆ ಸರ್ಕಾರವನ್ನು ಆಗ್ರಹಿಸಿದರು.
ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ನಂತರ ಕರವೇ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕರವೇ ಅಧ್ಯಕ್ಷ ಕೃಷ್ಣ ಪೂಜಾರಿ, ರೈತ ಸಂಘದ ಮುಖಂಡ ಹೊರಕೆರಪ್ಪ, ಗಿರೀಶ್, ರಾಜಣ್ಣ, ಹರೀಶ್, ಶಿವಕುಮಾರ್, ಮನೋಜ್,ರವಿ, ಮಧು, ರೈತ ಸಂಘದ ಕಾರ್ಯಕರ್ತರು ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.