ಕೋವಿಡ್ ಸೆಂಟರ್ ಗೆ ಆಕ್ಸಿಜನ್ ಸಿಲಿಂಡರ್ ಗಳ ಸಂಗ್ರಹಿಸಿ ಮಾನವೀತೆಯ ಮೆರೆದ ಸಿಪಿಐ ರಾಘವೇಂದ್ರ.

ಚಿತ್ರದುರ್ಗ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಹಟ್ಟಹಾಸ ಮುಂದುವರಿದಿದ್ದು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಿಸುತ್ತಿದ್ದೆವೆ. ಇಂತಹ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ದಾನಿಗಳು ಸಹಾಯ ಹಸ್ತ ಚಾಚುವುದನ್ನು ನೋಡಿರುವುದುಂಟು. ಅದೇ ಮಾದರಿಯಲ್ಲಿ ಹಿರಿಯೂರು ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ರಾಘವೇಂದ್ರ ರವರು ವರ್ಕ್ಸ್ ಶಾಪ್ ಗಳಲ್ಲಿ ಉಪಯೋಗಿಸದೇ ಇದ್ದ ಸುಮಾರು ಹದಿನೈದಕ್ಕೂ ಹೆಚ್ಚು ಆಮ್ಲಜನಕ ಸಿಲಿಂಡರ್ ಗಳನ್ನು ಸಂಗ್ರಹಿಸಿ ನಗರದ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಸೆಂಟರ್ ಗೆ ನೀಡಿದ್ದಾರೆ. ಇವರ ಸಾಮಾಜಿಕ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕರೋನಾ ಲಾಕ್ ಡೌನ್ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನುವ ಪ್ರಶಂಸೆ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿವೆ.
ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ ಪರಿಣಾಮ ನಗರದ ವೆಲ್ಡಿಂಗ್ ವರ್ಕ್ಸ್, ಮೆಟಲ್ ಕಟಿಂಗ್ ಸೆಂಟರ್ ಗಳಂತಹ ಇತರೆ ಅಂಗಡಿಗಳಲ್ಲಿ ಗ್ಯಾಸ್ ಸಿಲಿಂಡರ್ ಉಪಯೋಗಿಸುವಂತಹ ಅಂಗಡಿಗಳು ಮುಚ್ಚಿದ ಕಾರಣ ಕೋವಿಡ್ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿರುವ ಇನ್ಫೆಕ್ಟರ್ ರಾಘವೇಂದ್ರ ರವರು ಅಂತಹ ಅಂಗಡಿಗಳನ್ನು ಪತ್ತೆ ಹಚ್ಚಿ ಮಾಲೀಕರ ಮನವೂಲಿಸಿ ಆ ಸಿಲಿಂಡರ್ ಗಳನ್ನು ಪಡೆದು ಕೋವಿಡ್ ಸೋಂಕಿತರಿಗೆ ಅನುಕೂಲವಾಗಲೆಂದು ನೀಡಿರುತ್ತಾರೆ. ದಿನನಿತ್ಯದ ಠಾಣಾ ಕೆಲಸಗಳು, ಕಾನೂನು ಸುವ್ಯವಸ್ಥೆ ಹಾಗೂ ಕೊರೊನಾ ಬಂದೋಬಸ್ತ್ ಅಂತಹ ಕಠಿಣ ಕೆಲಸ-ಕಾರ್ಯಗಳ ಮದ್ಯೆಯೂ ಕೊರೊನಾ ಆಸ್ಪತ್ರೆಗೆ ಸಿಲಿಂಡರ್ ಸಂಗ್ರಹಿಸಿ ನೀಡುವುದರ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಿರುವ ಇನ್ಫೆಕ್ಟರ್ ರಾಘವೇಂದ್ರ ರವರ ಈ ಕೆಲಸಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ದೇಶವೂ ಕೊರೊನಾದಿಂದ ವಿಷಮ ಸ್ಥಿತಿಯಲ್ಲಿರುವಾಗ ಸಾರ್ವಜನಿಕರು ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸುವುದರ ಜೊತೆಗೆ ಸ್ವಯಂ ಸೇವಕರು, ಸಂಘ ಸಂಸ್ಥೆಗಳು ಹಾಗೂ ದಾನಿಗಳು ಈ ಸಮಯದಲ್ಲಿ ಕೊರೊನಾ ಸೋಂಕಿತರ ನೆರವಿಗೆ ಬರಬೇಕು ಹಾಗೂ ಯಾರು ಸಹ ಮನೆಯಿಂದ ಹೊರಗೆ ಬರಬಾರದು. ಎಂಬುದಾಗಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published.

Send this to a friend