ಸಿಲಿಂಡರ್ ಕಳ್ಳರನ್ನು ಬಂಧಿಸಿದ ನಗರ ಪೊಲೀಸರು.

ಹಿರಿಯೂರು ಜೂನ್ 19 : ನಗರದ ಹರಿಶ್ಚಂದ್ರ ಘಾಟ್ ಬಡಾವಣೆಯ ಕಸ್ತೂರಬಾ ಗಾಂಧಿ ಸರ್ಕಾರಿ ಹಾಸ್ಟಲ್ ನಲ್ಲಿ ಹಾಸ್ಟಲ್ ನಲ್ಲಿದ್ದ 03 ಗ್ಯಾಸ್ ಸಿಲಿಂಡರ್ ಗಳು, 14ಸ್ಟೀಲ್ ನಲ್ಲಿಗಳು, 1 ಡಿಪಿ ಸ್ವಿಚ್ ಸೇರಿದಂತೆ ಸುಮಾರು 11,400/- ಬೆಲೆಯ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದ ಆರೋಪಿಗಳನ್ನು ನಗರ ಪೋಲೀಸರು ಬಂದಿಸಿ ಆವರಿಂದ ಕಳವಾದ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.
ಏಪ್ರಿಲ್ ತಿಂಗಳ 21 ರಿಂದ ಲಾಕ್ ಡೌನ್ ಆದ ಪ್ರಯುಕ್ತ ಶಾಲೆಗಳು ಸ್ಥಗಿತಗೊಂಡಿದ್ದು ವಿದ್ಯಾರ್ಥಿನಿಲಯದ ಎಲ್ಲಾ ವಿದ್ಯಾರ್ಥಿಗಳನ್ನು ಊರುಗಳಿಗೆ ಕಳುಹಿಸಿ ಹಾಸ್ಟಲ್ ಸ್ಥಗಿತಗೊಳಿಸಲಾಗಿತ್ತು. ಈ ಸಮಯದಲ್ಲಿ ಆರೋಪಿಗಳು ಹಾಸ್ಟಲ್ ನಲ್ಲಿದ್ದ ಗ್ಯಾಸ್ ಸಿಲಿಂಡರ್ ಸೇರಿದಂತೆ ಇತರೆ ವಸ್ತುಗಳನ್ನು ಕಳವು ಮಾಡಲಾಗಿದೆ ಎಂಬುದಾಗಿ ವಾರ್ಡನ್ ವಿನುತ ರವರು ಪೋಲೀಸ್ ಠಾಣೆಗೆ ಜೂನ್ 11ರಂದು ದೂರು ನೀಡಿದ್ದರು.
ಈ ದೂರಿನ ಹಿನ್ನಲೆಯಲ್ಲಿ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿ.ರಾಧಿಕಾ ರವರು ಹಿರಿಯೂರು ಉಪವಿಭಾಗದ ಉಪಾಧೀಕ್ಷಕರಾದ ರೋಷನ್ ಜಮೀರ್, ಹಾಗೂ ನಗರ ಪೊಲೀಸ್ ಠಾಣೆಯ ಸಿಪಿಐ ರವರಾದ ವಿ.ಎಸ್. ಶಿವಕುಮಾರ್ ಇವರ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀಮತಿ ಕೆ.ಅನುಸೂಯ ಇವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಈ ನಿಟ್ಟಿನಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಹಮ್ಮದ್ ಹನೀಫ್, ಅನಿಲ್ ಕುಮಾರ್, ತಿಮ್ಮರಾಯಪ್ಪ, ವಸಂತಕುಮಾರ, ಸಿದ್ದಲಿಂಗೇಶ್ವರ, ರವರನ್ನೊಳಗೊಂಡ ತಂಡವು ಆರೋಪಿಗಳ ಬಗ್ಗೆ ಜೂನ್ 19ರಂದು ಮಾಹಿತಿಯನ್ನು ಸಂಗ್ರಹಿಸಿ ಆರೋಪಿಗಳಾದ 1) ನರಸಿಂಹ@ಜಟಾಲಿ 2) ಕೃಷ್ಣ @ಆಸಿಡ್ ಕೃಷ್ಣ 3) ನರಸಿಂಹಮೂರ್ತಿ @ ಗೋವಾ ಇವರುಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರಪೋಲೀಸರು ಈ ಆರೋಪಿಗಳಿಂದ ಸುಮಾರು ರೂ.7500/- ಬೆಲೆ ಬಾಳುವ ಗ್ಯಾಸ್ ಸಿಲಿಂಡರ್ ಗಳನ್ನು ವಶಪಡಿಸಿಕೊಂಡು ಸದರಿಯವರನ್ನು ದಸ್ತಗಿರಿ ಮಾಡಲಾಗಿದೆ ಎಂಬುದಾಗಿ ಪೋಲೀಸ್ ಮೂಲಗಳು ತಿಳಿಸಿವೆ. ಹಿರಿಯೂರು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಜಿ.ರಾಧಿಕಾರವರು ಶ್ಲಾಘಿಸಿದ್ದಾರೆ.

Leave a Reply

Your email address will not be published.

Send this to a friend