ಹಿರಿಯೂರು:ರಾಜ್ಯದಲ್ಲಿ ಡ್ರಗ್ಸ್ ವಿಚಾರ ಬಾರಿ ಸದ್ದು ಮಾಡುತ್ತಿದ್ದು,
ಹಿರಿಯೂರಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ದೇಶದ್ಯಾಂತ ಡ್ರಗ್ಸ್ ಮುಕ್ತಗೊಳಿಸಲು ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಈ ಕುರಿತು ಮಾತನಾಡಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕಾರಿಣಿ ಸದಸ್ಯೆ ಲಾವಣ್ಯ ಇಡೀ ದೇಶದಲ್ಲಿ ಡ್ರಗ್ಸ್ ಮಾಫಿಯಾ ವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ದೇಶವನ್ನು ಡ್ರಗ್ಸ್ ನಾಶ ಮುಕ್ತ ಭಾರತವನ್ನಾಗಿ ರೂಪಿಸಬೇಕು, ಹಾಗೂ ಈ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ, ಅವರನ್ನು ದೇಶದಿಂದ ಉಚ್ಚಾಟಿಸಬೇಕು ಎಂದು ಹೇಳಿದರು.
ಸಹಿ ಸಂಗ್ರಹ ಅಭಿಯಾನ ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಹಿರಿಯೂರು ನಗರ ಠಾಣೆಯ ಪಿಎಸ್ಐ ನಾಗರಾಜ್ ಚಾಲನೆ ನೀಡಿದರು. ನಗರದ ಅನೇಕ ಸಾರ್ವಜನಿಕರು ಸಹಿ ಮಾಡಿ ದೇಶಾದ್ಯಂತ ನಶಾ ಮುಕ್ತ ಭಾರತ ಜಾಗೃತಿ ಅಭಿಯಾನಕ್ಕೆ ಕೈಜೋಡಿಸಿದರು. ಈ ಕಾರ್ಯಕ್ರಮದಲ್ಲಿ ನಗರ ಕಾರ್ಯದರ್ಶಿ ವಿಜಯಕುಮಾರ್, ವಿದ್ಯಾರ್ಥಿ ಪ್ರಮುಖ್ , ದೀಪು ನಾಯಕ್, ತಾಲೂಕು ಸಂಚಾಲಕ ಮಂಜೇಶ್, ಹೋರಾಟ ಪ್ರಮುಖ ನಂದನ್ ಹಿರಿಯ ಕಾರ್ಯಕರ್ತ ಯೋಗೇಶ್. ನಗರಸಭೆ ಸದಸ್ಯರಾದ ಶಿವರಂಜಿನಿ, ಶೋಭಾ , ಅಂಬಿಕಾ, ಮಂಜುನಾಥ, ರವಿ, ರಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.