ಒಮ್ಮೆ ಅವಕಾಶ ಕೋಡಿ ಸಮಸ್ಯೆಗಳಿಗೆ ಸದನದಲ್ಲಿ ಧ್ವನಿ ಎತ್ತುವೆ : ಡಿ.ಟಿ.ಶ್ರೀನಿವಾಸ್.

ಹಿರಿಯೂರು : ಶಿಕ್ಷಕರ ಮತ್ತು ಪದವೀಧರರ ಅಳಲುಗಳ ಬಗ್ಗೆ ಅಪಾರವಾದ ಅರಿವಿದೆ. ಮುಂಬರುವ ದಿನಗಳಲ್ಲಿ ಸದನದಲ್ಲಿ ನಿಮ್ಮ ಸಮಸ್ಯೆಗಳಿಗೆ ಉತ್ತರ ಸಿಗಬೇಕಾದರೆ ಆಗ್ನೇಯ ಪದವೀಧರ ಕ್ಷೇತ್ರದ ಮತದಾರರು ನನ್ನ ಮೇಲೆ ವಿಶ್ವಾಸ ಇರಿಸಿ ಕ್ಷೇತ್ರದ ಪ್ರತಿನಿಧಿಯಾಗಿ ನನ್ನನ್ನು ಆಯ್ಕೆ ಮಾಡಿದ್ದಲ್ಲಿ ಸದನದಲ್ಲಿ ಪ್ರತಿಧ್ವನಿ ಮೊಳಗಿಸುವ ಮೂಲಕ ನಿಮಗೆ ನ್ಯಾಯ ದೊರಕಿಸಿಕೋಡುವೆ ಎಂದು ಆಗ್ನೇಯ ಪದವಿಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅಭಿಪ್ರಾಯ ಪಟ್ಟಿದ್ದರು.

ನಗರದ ರೋಟರಿ ಭವನದ ಎ.ಕೃಷ್ಣಪ್ಪ ಸಭಾಂಗಣದಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಕ್ಷೇತ್ರದಲ್ಲಿ ಹಿಂದೆ ಆಯ್ಕೆಯಾದವರಿಗೆ ಇಚ್ಚಾಸಕ್ತಿ, ಬದ್ಧತೆ ಕೊರೆತೆಯಿಂದ ಸ್ವಾರ್ಥಕ್ಕೆ ನಿಮ್ಮ ಮತಗಳನ್ನು ಉಪಯೋಗಿಸಿ ನಿಮ್ಮನ್ನು ಮರೆತವರಿದ್ದಾರೆ. ನನ್ನ ಮೇಲೆ ವಿಶ್ವಾಸ ಇರಿಸಿ ನನ್ನನ್ನು ಬೆಂಬಲಿಸಿದರೆ ನಿಮ್ಮ ಋಣವನ್ನು ತೀರಿಸುವ ಕೆಲಸ ನಾನು ಮಾಡುವೆ ಎಂದು ಭರವಸೆ ನೀಡಿದರು.
ಹಿರಿಯೂರು ವಿಧಾನಸಭಾ ಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ನನ್ನದೇ ಆದ ರೀತಿಯಲ್ಲಿ ದುಡಿದ ಉದಾಹರಣೆ ನಿಮ್ಮ ಮುಂದಿದೆ, ಇದೇ ನಂಬಿಕೆ ನನ್ನ ಮೇಲೆ ಮೊದಲ ಪ್ರಾಶಸ್ತ್ಯದ ಮತಗಳಿಂದಲೇ ಗೆಲ್ಲುವಂತೆ ಮಾಡಿ ನಿಮ್ಮ ಎಲ್ಲಾ ಸಮಸ್ಯಗಳನ್ನು ಮೊದಲ ಪ್ರಾಶಸ್ತ್ಯದಲ್ಲೆ ನೀಗಿಸುವ ಭರವಸೆ ನೀಡುತ್ತೇನೆ ಎಂದರು.

ಈಗಾಗಲೇ ಎಲ್ಲಾ ತಾಲ್ಲೂಕಿನ ಮತದಾರರು ನನಗೆ ಅಭೂತ ಪೂರ್ವ ಬೆಂಬಲ ವ್ಯಕ್ತಪಡಿಸಿದ್ದು, ನನಗೆ ರಾಜಕೀಯ ಪ್ರಾಧ್ಯನತೆ ಕೊಟ್ಟ ಹಿರಿಯೂರು ತಾಲ್ಲೂಕಿನಲ್ಲಿ ಅತೀ ಹೆಚ್ಚು ಮತಗಳನ್ನು ನೀಡಿ ಆಶಿರ್ವದಿಸಿ ಒಮ್ಮೆ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲ್ಲೂಕು ಗೊಲ್ಲ ಸಂಘದ ಅಧ್ಯಕ್ಷ ಆರ್. ರಂಗಸ್ವಾಮಿ, ಮಾಜಿ ಎಪಿಎಂಸಿ ಅಧ್ಯಕ್ಷ ಬಿ ಕೆ ಉಗ್ರಮೂರ್ತಿ, ನಿಂಗರಾಜು, ನಗರಸಭೆ ಸದಸ್ಯರಾದ ಪಲ್ಲವ, ಬಾಲಕೃಷ್ಣ, ಚಿರಂಜೀವಿ, ಸರವಣ, ಕದ್ರುಗಣೇಶ್, ಕೃಷ್ಣಮೂರ್ತಿ, ತಿಪ್ಪೇಸ್ವಾಮಿ, ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published.

Send this to a friend