ಹಿರಿಯೂರು ಜೂನ್,19 : ಕರೋನಾ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು, ಮತ್ತೊಬ್ಬರ ಜೀವ ಉಳಿಸಿರುವ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಶ್ಲಾಘನೀಯವಾಗಿದೆ ಎಂದು ಸಮಾಜ ಸೇವಕ ವೇಣುಕಲ್ ಗುಡ್ಡದ ಕೆ. ಅಭಿನಂದನ್ ತಿಳಿಸಿದರು. ತಾಲೂಕಿನ ಇಕ್ಕನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಿಹಳ್ಳಿ ಗ್ರಾಮದಲ್ಲಿ ಬಡವರಿಗೆ, ನಿರ್ಗತಿಕರಿಗೆ ಹಮ್ಮಿಕೊಂಡಿದ್ದ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ, ಆಹಾರ ಕಿಟ್ ವಿತರಿಸಿ ಮಾತನಾಡಿದರು. ಮೇ ತಿಂಗಳ ಮೊದಲ ವಾರದಲ್ಲಿ ಕರೋನಾ ಪ್ರತಿಯೊಬ್ಬ ವ್ಯಕ್ತಿಗೆ ಭಯವನ್ನು ಹುಟ್ಟಿಸಿ, ಜೀವನದಲ್ಲಿ ಒಂದು ಪಾಠ ಕಲಿಸಿದೆ. ಇಂತಹ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಬಡವರಿಗೆ ಸಣ್ಣ ಅಳಿಲು ಸೇವೆ ಮಾಡಲು ಮುಂದೆ ಬಂದಿದ್ದೆನೆ ಎಂದರು.
” ಒಬ್ಬ ವ್ಯಕ್ತಿಗೆ ಎಲ್ಲವನ್ನೂ ನಾವು ಕೊಡುವುದಕ್ಕೆ ಸಾಧ್ಯವಿಲ್ಲ, ಆದರೆ ಧೈರ್ಯ ತುಂಬುವ ಕೆಲಸ ಮಾಡಿದರೆ ಅವರ ಜೀವನದಲ್ಲಿ ನೀನು ಮಾಡಿದ ಅತಿ ದೊಡ್ಡ ಸಹಾಯವಾಗುತ್ತದೆ ಹಾಗೂ ಆ ವ್ಯಕ್ತಿ ಬದುಕಲು ಸಹಾಯಕಾರಿಯಾಗುತ್ತದೆ ಎಂದರು ಹೇಳಿದರು. ನಾನು ವಿಜಯೇಂದ್ರ ಯಡಿಯೂರಪ್ಪ ಅವರ ದೊಡ್ಡ ಅಭಿಮಾನಿ. ವಿಜಯೇಂದ್ರ ಅವರು ಪ್ರತಿಯೊಂದು ಜಿಲ್ಲೆಗೂ ಅಂಬುಲೆನ್ಸ್ ಕೊಟ್ಟಿದ್ದಾರೆ. ತಳಮಟ್ಟದ ವ್ಯಕ್ತಿಗೆ ಸಹಾಯ ಆಗಲಿ ಎಂದು ಅವರು ಕೆಲಸ ಮಾಡುತ್ತಿದ್ದರು. ಅವರನ್ನು ನೋಡಿದ ನನಗೆ ನನ್ನ ಊರಿಗೆ ನನ್ನ ಕೈಲಾದ ಮಟ್ಟಿಗೆ ನಾನು ಸೇವೆ ಮಾಡುತ್ತಿದ್ದೆನೆ ಎಂದು ತಿಳಿಸಿದರು. ನಾವು ಹುಟ್ಟಿರುವುದಕ್ಕೆ ಸಾರ್ಥಕ ಆಗಬೇಕೆಂದರೆ, ಹುಟ್ಟಿದ ಊರಿಗೆ ಏನಾದರೂ ಸಹಾಯ ಮಾಡಬೇಕು ಎಂದು ಹೇಳಿದರು. ನಾನು ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ಪ್ರಾಮುಖ್ಯತೆ ಕೊಡುತ್ತೆನೆ. ಯಾರಾದರೂ ಶಿಕ್ಷಣಕ್ಕೆ ತೊಂದರೆ ಆದರೆ, ಅವರು ಶಿಕ್ಷಣದಿಂದ ವಂಚಿತರಾಗಬಾರದು ಅಂತವರಿಗೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತೇನೆ ಎಂದರು. “ನಿಮ್ಮೊಂದಿಗೆ ನಾವು ಇದ್ದೇವೆ” ಎಂಬ ಶಿರ್ಷಿಕೆ ಅಡಿಯಲ್ಲಿ ಸಣ್ಣ ಅಳಿಲು ಸೇವೆ ಸಲ್ಲಿಸಲು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿನಂದನ್ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಇಕ್ಕನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ರತ್ನಮಣಿ, ರಾಕೇಶ್ ಯಾದವ್, ಬಸವರಾಜ್, ಏಕಾಂತ್, ರಂಗನಾಥ್, ಕೀರ್ತಿ ಕುಮಾರ್, ಸುಮಿತ್ರಾ ಬಾಯಿ,ಗೀತಮ್ಮ ಸೇರಿದಂತೆ ವಿವಿಧ ಗ್ರಾಮಸ್ಥರು ಭಾಗವಹಿಸಿದ್ದರು.