ಚಿತ್ರದುರ್ಗ : ಟೊಮೊಟೊ ಬೆಲೆ ಕುಸಿತದಿಂದ ಕೋಟೆ ನಾಡಿನ ರೈತರೊಬ್ಬರು ಬೆಳೆದ ಟೊಮೊಟೊ ಹಣ್ಣುಗಳನ್ನು ಟ್ರ್ಯಾಕ್ಟರ್ ನಲ್ಲಿ ತುಂಬಿ ಬೀಳಿಗೆ ಸುರಿದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕರಿಯೊಬನಹಳ್ಳಿ ಗ್ರಾಮದಲ್ಲಿ ಬುಧವಾರ ಮತ್ತು ಗುರುವಾರ ಬೆಳಕಿಗೆ ಬಂದಿದೆ.
ರೈತ ಮುಕುಂದ ಹಾಗೂ ಸಹ ಪಾರ್ಟ್ನರ್ ಆಗಿ ಪಾತಲಿಂಗಪ್ಪ ಅವರೊಂದಿಗೆ 3. ಎಕರೆ 20 ಗುಂಟೆ ಯಲ್ಲಿ ಸುಮಾರು 3.ಲಕ್ಷದ 25 ಸಾವಿರ ರೂಪಾಯಿ ಖರ್ಚ್ ಮಾಡಿ ಟೊಮೊಟೊ ಬೆಳೆದಿದ್ದರು. ಫಸಲು ಉತ್ತಮವಾಗಿ ಬಂದಿತ್ತು ಆದರೆ ಬೆಲೆ ಕುಸಿತದಿಂದ ಅಧಿಕ ಲಾಭದ ನಿರೀಕ್ಷೆಯಲ್ಲಿದ್ದ ರೈತ ಮುಕುಂದನಿಗೆ ಬೆಲೆ ಕುಸಿತದಿಂದ ಕಂಗಾಲಾಗಿದ್ದಾನೆ.
ಹಿರಿಯೂರು ನಗರದಲ್ಲಿ ಪ್ರತಿನಿತ್ಯ 100 ರಿಂದ 200 ಚೀಲ ವ್ಯಾಪಾರ ಆಗುತ್ತದೆ. ಖರೀದಿ ಮಾಡುವವರು ಯಾರು ಇರುವುದಿಲ್ಲ ಹಾಗಾಗಿ
ಹೆಚ್ಚು ಟೊಮೆಟೊ ಬೆಳೆದಿದ್ದರಿಂದ ಇಲ್ಲಿಯೇ ಮಾರಾಟ ಮಾಡಲಾಗದೆ ಕೋಲಾರ ಮಾರುಕಟ್ಟೆಗೆ ಕೊಂಡೊಯ್ಯುತ್ತಿದ್ದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಕುಂದ ಸರ್ ನಾವು ಸುಮಾರು 3 ಎಕರೆಯಲ್ಲಿ, 3 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಟೊಮೊಟೊ ಬೆಳೆದಿದ್ವಿ, ಜೊತೆಗೆ ಲಾಭದ ನಿರೀಕ್ಷೆಯಲ್ಲಿದ್ದೆವು. ಬೆಳೆದ ಟೊಮೊಟೊ ಹಣ್ಣುಗಳನ್ನು ಒಂದು ವಾರದಿಂದ ಕೋಲಾರ ಮಾರುಕಟ್ಟೆಗೆ ಕೊಂಡೊಯ್ಯುತ್ತಿದ್ದೆವು. ಇದೀಗ ನಾವು ಬೆಳೆದ ಟೊಮೊಟೊ ಬೆಳೆಗೆ ಬೆಲೆ ಇಲ್ಲದಂತಾಗಿದೆ ಎಂದರು. ಒಂದು ಕ್ರೇಟ್ ಗೆ 15 ಕೆಜಿ, ಇರುವ ಟೊಮೊಟೊ ಗೆ 40-50 ಬೆಲೆ ಸಿಗುತ್ತದೆ. ಇಲ್ಲಿಂದ ಕೊಲಾರಕ್ಕೆ ಕೊಂಡೊಯ್ಯಲು ನಮಗೆ ತುಂಬಾ ನಷ್ಟ ಉಂಟಾಗುತ್ತದೆ, ಹೆಚ್ಚು ಖರ್ಚು ತಲೆ ಮೇಲೆ ಬರುತ್ತದೆ ಎಂದು ತಿಳಿಸಿದರು. ಈಗಲೂ ಸಹ ಹೊಲದಲ್ಲಿ 2000 ದಿಂದ 3000 ಹಣ್ಣುಗಳು ಗಿಡದಲ್ಲಿವೆ. ಒಂದು ಹೆಣ್ಣಾಳಿಗೆ ಕೂಲಿ 300, ಒಂದು ಗಂಡಾಳಿಗೆ 500 ಕೂಲಿ ಕೊಡಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ದಲ್ಲಾಳಿ, ಕಮಿಷನ್ ಎಲ್ಲ ಲೆಕ್ಕ ಹಾಕಿದ್ದಾರೆ ತುಂಬಾ ಲಾಸ್ ಆಗುತ್ತದೆ ಏನು ಮಾಡಲಿ ಸಾರ್ ವಿಧಿಯಿಲ್ಲದೆ
ಬೆಲೆ ಕುಸಿತದಿಂದ ಬೆಳೆದ ಹಣ್ಣುಗಳನ್ನು ಬೀಳು ನೆಲಕ್ಕೆ ಸುರಿಯುತ್ತಿದ್ದೆವೆ ಎಂದು ಅಳಲನ್ನು ತೋಡಿಕೊಂಡರು.