ಕೊರೊನಾ ಸಂದರ್ಭದಲ್ಲಿ ಎಪಿಎಂಸಿ,ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ಜಾರಿಗೆ ತರಲು ಅವಶ್ಯಕತೆ ಇತ್ತಾ : ಕೇಂದ್ರಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನೆ .
ಚಿತ್ರದುರ್ಗ : ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ 20 ಜನ ಭಾರತೀಯ ಸೈನಿಕರನ್ನು, ಚೀನಾ ಸೈನಿಕರು ದೇಶದಲ್ಲಿ ನುಗ್ಗಿ ಕೊಂದು ಹಾಕಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಮಹಾಮಾರಿ ಕೊರೊನಾ ವೈರಸ್ ಹರಡಿದೆ. ಚೀನಿ ಸೇನೆ ಹಾಗೂ ದೇಶದಲ್ಲಿ ಕೊರೊನಾ ಹಬ್ಬಿದ್ದು ಪರಿಸ್ಥಿತಿ ಹೀಗಿರಬೇಕಾದಾಗ ನೀವು ಇವುಗಳ ಬಗ್ಗೆ ಕ್ರಮಕೈಗೊಳ್ಳದೆ, ಕೊರೊನಾ ಹಿಮ್ಮೆಟ್ಟಿಸುವುದನ್ನು ಬಿಟ್ಟು ಎಪಿಎಂಸಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವುದು ಅವಶ್ಯಕತೆ ಇತ್ತಾ ಪ್ರಧಾನಿ ಮೋದಿಯವರೇ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಎಪಿಎಂಸಿ ಆವರಣದಲ್ಲಿ ನಡೆದ ರೈತರ ಸಮಾವೇಶದಲ್ಲಿ ಭಾಗವಹಿಸಿದ ಮಾತಾಡಿದ ಅವರು
ದೇಶದಲ್ಲಿ ಪಕ್ಕದ ದೇಶದ ಸೈನಿಕರು ಗುಡಿಯೊಳಗೆ ನುಗ್ಗಿದರೆ. ದೇಶದಲ್ಲಿ ಕೊರೊನಾ ಇದೆ ಆದ್ಯತೆ ಯಾವುದಕ್ಕೆ ಇರಬೇಕು, ಕೊರೊನಾವನ್ನಾ ದೇಶದ ಜನರಿಂದ ಮುಕ್ತ ಮಾಡಬೇಕು, ಇಲ್ಲ ಸೇನೆಯ ಬಗ್ಗೆ ಮುಂದಿನ ಕ್ರಮ ಏನು ಅನ್ನೋದರ ಬಗ್ಗೆ ತೀವ್ರವಾದ ಆಲೋಚನೆ ಇರಬೇಕು ಅದನ್ನು ಬಿಟ್ಟು ಎಪಿಎಂಸಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದರಲ್ವಾ ಅವತ್ತಿನ ಮಟ್ಟಿಗೆ ಅವಶ್ಯಕತೆ ಇತ್ತಾ ? ಕೊರೊನಾ ಟೈಂ ನಲ್ಲಿ ದೇಶದ ಜನರ ಬಾಯಿಗೆ ಬಟ್ಟೆ ಕಟ್ಟಿ ಕುರಿಸಿ ಲಾಕ್ ಡೌನ್ ಮಾಡಿ, ಮನೆಯಿಂದ ಹೊರ ಬಂದ ಜನರನ್ನು ಹೊಡೆಯುವಂತೆ ಪೋಲಿಸರಿಗೆ ಅಧಿಕಾರ ಕೊಟ್ರಲ್ವಾ ಪ್ರಧಾನಿ ಮೋದಿಯವರೇ ನೀವು ಏನು ಮಾಡಿದಿರಿ ಎಂದು ಪ್ರಶ್ನಿಸಿದರು. ಎಪಿಎಂಸಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದರಲ್ವಾ ಇದು ಅವತ್ತಿಗೆ ಬಹುಮುಖ್ಯ ವಾಗಿತ್ತಾ ಅವಶ್ಯಕತೆ ಇತ್ತಾ ಇದು ಕೊರೊನಾ ಸಮಸ್ಯೆಗೆ ಪರಿಹಾರನಾ ಅಥವಾ ದೇಶದಲ್ಲಿ ಗಡಿಯಲ್ಲಿರುವ ಸೈನ್ಯಕ್ಕೆ ಪರಿಹರಾನಾ ? ದೇಶದ ಆರ್ಥಿಕತೆ ದಿವಾಳಿತನ ಎದ್ದಿರುವುದಕ್ಕೆ ಪರಿಹಾರಾನಾ ಎಂದು ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದಿದ್ದರು. ರೋಗ ರುಜಿನಗಳು, ದೇಶಾದ್ಯಂತ ಸಾವು ನೋವು ಸಂಭವಿಸಿದಾಗ ಮೂಲಕ, ಯುದ್ಧದ ವಾತಾವರಣ ಇದ್ದರೆ ಸುಗ್ರೀವಾಜ್ಞೆ ಜಾರಿಗೆ ತರುತ್ತಾರೆ.ಆದರೆ ಇದು ಯಾವುದಕ್ಕೂ ಸಂಬಂಧವಿಲ್ಲದೆ ರೈತರ ವಿಷಯದಲ್ಲಿ ನೀವು ಸುಗ್ರೀವಾಜ್ಞೆ ಮೂಲಕ
ಜನರ ಜೊತೆಗೆ ಚರ್ಚೆ ಮಾಡದೆ, ವಿಧಾನ ಸಭೆ ಮತ್ತು ಸಂಸತ್ ನಲ್ಲಿಲ್ಲಿ ಚರ್ಚೆ ಮಾಡದೆ ಜಾರಿಗೆ ತಂದರಲ್ವಾ ಮಿಸ್ಟರ್ ಮೋದಿ ಇದು ಸರಿನಾ ಎಂದರು ಇದಕ್ಕೂ ಮೊದಲು ರಂಜಿತಾ ಹೋಟೆಲ್ ನಿಂದ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು, ಗಾಂಧಿ ವೃತ್ತದಲ್ಲಿ ರೈತ ಸಂಘದ ಕಛೇರಿ ಉದ್ಘಾಟಿಸಿದರು.
ಸಭೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ಹೆಚ್.ಆರ್. ತಿಮ್ಮಯ್ಯ, ಸಿದ್ದರಾಮಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.