ಚಿತ್ರದುರ್ಗ : ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಳಿಯಾರು ರಸ್ತೆಯ ಹಾಲ್ ಮಾದೇನಹಳ್ಳಿ ಗೇಟ್ ಬಳಿ ಮುಂಜಾನೆ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಹಿರಿಯೂರು ಕಡೆಯಿಂದ ಹುಳಿಯಾರು ಕಡೆ ಹೋಗುತ್ತಿದ್ದ ಲಾರಿ ಮತ್ತು ಹುಳಿಯಾರು ಕಡೆಯಿಂದ ಹಿರಿಯೂರು ಕಡೆಗೆ ಬರುತ್ತಿದ್ದ ಲಾರಿ ಎರಡು ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು ಲಾರಿ ಚಾಲಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಂದು ತಮಿಳುನಾಡು ಮೂಲದ TN -37, DY -6115 ಲಾರಿ ಮತ್ತು ಕರ್ನಾಟಕ ರಾಜ್ಯದ ಲಾರಿ KA 06, 2669 ನಂಬರ್ ಲಾರಿಗಳು ಎಂದು ತಿಳಿದು ಬಂದಿದೆ.
ಮೃತರ ಗುರುತು ಪತ್ತೆಯಾಗಿಲ್ಲ.
ವಿಷಯ ತಿಳಿದ ತಕ್ಷಣ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.