ಚಿತ್ರದುರ್ಗ : ಕ್ಷೇತ್ರದಿಂದ ಯಾವುದೇ ಹಣ ಸರ್ಕಾರಕ್ಕೆ ವಾಪಸ್ ಹೋಗಿಲ್ಲ ಎಂದು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಮಾಜಿ ಸಚಿವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಿನ್ನೆ ಹಿರಿಯೂರು ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆದಿದ್ದು ಕಾಂಗ್ರೆಸ್ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿ ಮಾತನಾಡಿದ ಮಾಜಿ ಸಚಿವ ಡಿ. ಸುಧಾಕರ್ “ನನ್ನ ಅಧಿಕಾರದ ಅವಧಿಯಲ್ಲಿ ಸರ್ಕಾರ ಬಿಡುಗಡೆ ಮಾಡಿದ್ದ ಹಣವನ್ನು ಈಗಿನ ಸರ್ಕಾರ ಹಣ ವಾಪಸ್ ಪಡೆದುಕೊಂಡಿದೆ” ಎಂಬ ಹೇಳಿಕೆಯನ್ನು ಖಂಡಿಸಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಒಬ್ಬ ಮಾಜಿ ಸಚಿವರಾಗಿ ಸಾರ್ವಜನಿಕರಿಗೆ ತಪ್ಪು ಮಾಹಿತಿಯನ್ನು ನೀಡಬಾರದು ಎಂದರು. ನಾನಾಗಲಿ ಅಥವಾ ಅವರಗಾಲಿ ಕೈಯಿಂದ ದುಡ್ಡು ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಿಲ್ಲ, ಬದಲಾಗಿ ಜನರ ತೆರಿಗೆ ಹಣದಿಂದ ನಾವು ಅಭಿವೃದ್ಧಿ ಮಾಡುವುದು ಎಂದು ಮಾಜಿ ಸಚಿವರ ಹೇಳಿಕೆಗೆ ಪೂರ್ಣಿಮಾ ಪ್ರತಿಕ್ರಿಯಿಸಿದರು.
2008 ರಿಂದ 2018 ವರೆಗೆ ಹಿರಿಯೂರು ಕ್ಷೇತ್ರದ ಶಾಸಕರಾಗಿದ್ದು 2008 ರಿಂದ ಹುಳಿಯಾರು ರಸ್ತೆ ಅಗಲೀಕರಣ ಮತ್ತು ದುರಸ್ತಿ ಬಗ್ಗೆ ಇವರ ಗಮನಕ್ಕೆ ಬಂದಿರಲಿಲ್ಲವೇ ಎಂದು ಪ್ರಶ್ನಿಸಿದರು. ಅವರು ಬಹಳ ಚಾಣಾಕ್ಷತೆ ಯಿಂದ 2018 ರ ಚುನಾವಣಾ ಗಿಮಿಕ್ ಗಾಗಿ, ಜನರ ಕಣ್ ಹೊರೆಸುವುದಕ್ಕಾಗಿ ಹಣ ತಂದಿದ್ರಾ ?. ಅವರು ಹಣ ತರುವುದು ಮುಖ್ಯವಲ್ಲ, ಅದನ್ನು ಕಾರ್ಯರೂಪಕ್ಕೆ ತರುವುದು ಮುಖ್ಯವಾಗಿರುತ್ತದೆ. ಹುಳಿಯಾರು ರಸ್ತೆ ಬಗ್ಗೆ ಅವರಿಗೆ ಕಾಳಾಜಿ ಇದ್ದಿದ್ದರೆ ಮೊದಲೇ ರಸ್ತೆ ಅಗಲೀಕರಣ ಮಾಡುತಿದ್ದರು. ಯಾವುದೇ ಹಣ ವಾಪಸ್ ಹೋಗಿಲ್ಲ, ಜನರ ತೆರಿಗೆ ಹಣವನ್ನು ಪೋಲ್ ಮಾಡಬಾರದು ಎಂಬುದು ನಮಗೆ ಗೋತ್ತಿದೆ ಎಂದರು. ಈಗಾಗಲೇ 04 ಕೋಟಿ ಕಾಮಗಾರಿ ಕೆಲಸ ಮುಗಿದಿದೆ. ಉಳಿದಿರುವ ಹಣ ಸರ್ಕಾರದಿಂದ ಬಿಡುಗಡೆ ಮಾಡಿದ ಹಣ ದಿಕ್ಕು ದಿಸೆ ಇಲ್ಲದ ಹಣವಾಗಿತ್ತು. ಒಂದು ರಸ್ತೆ ಅಗಲೀಕರಣ ಮಾಡಬೇಕಾದರೆ ಡಿಪಿಆರ್ ನಲ್ಲಿ ಬರುವ ವಿದ್ಯುತ್ ಕಂಬ, ಕುಡಿಯುವ ನೀರಿನ ಪೈಪ್ ಗಳು, ರಸ್ತೆ ಪಕ್ಕದ ಮರಗಳು ಇವೆಲ್ಲವುಗಳ ಇಲಾಖೆಗೆ ಇಂತಿಷ್ಟು ಹಣ ಎಂದು ಡಿಪಿಆರ್ ನಲ್ಲಿ ನಮೂದು ಮಾಡಬೇಕಿತ್ತು. ಆದರೆ ಇದು ಯಾವುದು ಆಗಿಲ್ಲ. ಆದರೆ ಜನರ ಕಣ್ಣು ಹೊರೆಸೋಕ್ಕೆ ಹಣ ತಂದಿದ್ರು, ಇದನ್ನು ಬದಲಾಯಿಸಿ ಈಗ ಟೆಂಡರ್ ಕರೆದಿದ್ದು ಶೀಘ್ರದಲ್ಲೇ ಕಾಮಗಾರಿ ಕೈಗೊಳ್ಳಲಾಗುವುದು ಎಂದರು. ಹಿರಿಯೂರು ನಗರದ ಅಭಿವೃದ್ಧಿ ಬಗ್ಗೆ ನಮಗೂ ಕಳಕಳಿ ಕಾಳಾಜಿ ಇರುತ್ತದೆ ಕೋರೊನಾ ಹಿನ್ನೆಲೆಯಲ್ಲಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಎಂದರು.
ನಮ್ಮ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ, ಯಾವುದೇ ಹಣ ಕೂಡ ಪೋಲ್ ಆಗಿಲ್ಲ. ಅವರು ಶಾಸಕರಾಗಿದ್ದಾಗ ಸಂದರ್ಭದಲ್ಲಿ ಇತ್ತು ಅದ್ಕೆ ನೆನಪಿಸಿಕೊಂಡಿದ್ದಾರೆ, ಈಗ ಎಲ್ಲ ಸರ್ಕಾರಿ ಕಛೇರಿಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಇದನ್ನು ನಾನು ಹೇಳ್ತಿಲ್ಲ, ನಾನು ಹಳ್ಳಿಗಳಿಗೆ ಹೋದಾಗ ಸಾರ್ವಜನಿಕರೇ ಹೇಳುತ್ತಿರುತ್ತಾರೆ ಎಂದರು.
ಅವರ ಹತ್ತು ವರ್ಷಗಳ ಕಾಲದಲ್ಲಿ ಬಾಕಿ ಉಳಿಸಿಕೊಂಡಿದ್ದ 650 ಕ್ಕೂ ಹೆಚ್ಚು ಹಕ್ಕಪತ್ರಗಳನ್ನು ನಾವು ಕೊಟ್ಟಿದ್ದೆವೆ. ಉತ್ತಮ ಆಡಳಿತ ಕೊಟ್ಟಿವಿ ಎಂದು ತನ್ನನ್ನು ತಾನು ಹೊಗಳಿಕೊಳ್ಳುವುದಲ್ಲ, ಉತ್ತಮ ಆಡಳಿತ ಕೊಟ್ಟಿದ್ರೆ ತಮ್ಮ ಮೇಲೆ ಸಿಬಿಐ ಕೇಸ್ ಯಾಕೆ ದಾಖಲಾಗುತ್ತಿತ್ತು ಎಂದು ಡಿ.ಸುಧಕಾರ್ ಗೆ ಪ್ರಶ್ನಿಸಿದರು.