ಜನ ಸಂಪರ್ಕ ಸಭೆಯಲ್ಲಿ ಸಮಸ್ಯೆಗಳಿಗೆ ಪರಿಹಾರ: ಕೆ.ಪೂರ್ಣಿಮಾ.

ಹಿರಿಯೂರು : ಈಗಾಗಲೇ ಗ್ರಾಮಗಳ ಅಭಿವೃದ್ಧಿ ಪಡಿಸುವ ನಿಟ್ಟಿನಿಲ್ಲಿ ಗ್ರಾಮ ಸಭೆಗಳನ್ನು ನಡೆಸಿ ಆಗಿಂದಾಗ್ಗೆ ಅಭಿವೃದ್ಧಿ ಪರಿಶೀಲಿಸಲಾಗುತ್ತಿದೆ, ಅದೇ ರೀತಿ ನಗರಗಳಲ್ಲಿಯೂ ಸಹ ಸಾರ್ವಜನಿಕರಿಗೆ ಅನೇಕ ಕುಂದು ಕೊರತೆಗಳಿದ್ದು, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಗಳ ಸಭೆಗಳನ್ನು ಕರೆದು ಪರಿಶೀಲಿಸಬೇಕಾಗುತ್ತದೆ, ಈ ಹಿನ್ನೆಲೆಯಲ್ಲಿ ಸಂಪರ್ಕ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಕ್ಷೇತ್ರದ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ನಗರದ ಹುಳಿಯಾರು ರಸ್ತೆಯಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿ ನಾಗರೀಕರ ಅಹವಾಲುಗಳನ್ನು ಆಲಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ “ಸಕಾಲ ಜನಸಂಪರ್ಕ” ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಗರ ಸಮಸ್ತ ನಾಗರೀಕರಿಗೆ ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿತರಣೆ, ಕುಡಿಯುವ ನೀರಿನ ಸಮಸ್ಯೆ, ನೈರ್ಮಲ್ಯ, ಸ್ವಚ್ಚತೆ, ಈ-ಆಸ್ತಿ ನಕಲು ವಿತರಣೆ, ಕಟ್ಟಡ ಪರವಾನಿಗೆ, ಉದ್ದಿಮೆಪರವಾನಿಗೆ ಹಾಗೂ ಇತರೆ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಆಲಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈ ಸಂಪರ್ಕ ಸಭೆ ಆಯೋಜಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂಬುದಾಗಿ ಕರೆ ನೀಡಿದರು.
ತಾಲ್ಲೂಕಿನಲ್ಲಿ ಕಳೆದೆರಡು ವರ್ಷಗಳಿಂದ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಬರದ ನಾಡಾದ ಈ ಬಯಲು ಸೀಮೆಗೆ ಭದ್ರೆಯನ್ನು ಎರಡು ಬಾರಿ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿಸುವ ಮೂಲಕ ಜಿಲ್ಲೆಯ ಹಲವು ಕೆರೆಗಳನ್ನು ತುಂಬಿಸಿ, ರೈತರಿಗೆ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಅಲ್ಲದೆ ಗ್ರಾಮೀಣ ಪ್ರದೇಶ ಸೇರಿದಂತೆ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ಸಹ ದೂರಮಾಡಿದ್ದಾರೆ. ಅದಕ್ಕಾಗಿ ಅವರಿಗೆ ನಗರದ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂಬುದಾಗಿ ಹೇಳಿದರು.
ಅಲ್ಲದೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಈಗ ಕಣ್ಣಿನ ತಜ್ಞರು, ಹೆರಿಗೆ ವೈದ್ಯರು, ಮಕ್ಕಳ ತಜ್ಞರು ಹೀಗೆ ಹಲವು ಪರಿಣಿತ ವೈದ್ಯರುಗಳ ಸೇವೆ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿದ್ದು, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಮತ್ತು ಕೊರೊನಾ ಚಿಕಿತ್ಸೆಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ, ಆಸ್ಪತ್ರೆಯಲ್ಲಿ ಶೌಚಾಲಯ ಸೇರಿದಂತೆ ಹಲವಾರು ಮೂಲಭೂತ ಸೌಲಭ್ಯಗಳ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ ಎಂಬುದಾಗಿ ಶಾಸಕರು ಹೇಳಿದರು.
ತಾಲ್ಲೂಕಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಕಳೆದೆರಡು ವರ್ಷಗಳಿಂದ ನಡೆಯುತ್ತಿದ್ದರೂ ಕೆಲವು ಯೋಜನೆಗಳು ಇನ್ನೂ ಬಾಕಿ ಉಳಿದಿದೆ. ಅವುಗಳಲ್ಲಿ ಮುಖ್ಯವಾದ ಯೋಜನೆಯೆಂದರೆ ನಗರದಲ್ಲಿ ಒಂದು ಸಾರಿಗೆ ಡಿಪೋ ನಿರ್ಮಾಣ, ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿ, ಹತ್ತಾರು ವರ್ಷಗಳಿಂದ ಗೋಪಾಲಪುರ, ಆಜಾದ್ ನಗರದಲ್ಲಿ ವಾಸವಾಗಿರುವ ನಾಗರೀಕರಿಗೆ ಹಕ್ಕುಪತ್ರ ವಿತರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಬಾಕಿ ಇದ್ದು, ಕೊರೊನಾ ಸಂಕಷ್ಟದಿಂದಾಗಿ ಅವುಗಳನ್ನು ಕಾರ್ಯರೂಪಕ್ಕೆ ತರಲು ತಡವಾಗಿದೆ, ಗ್ರಾಮ ಪಂಚಾಯಿತಿಯ ಚುನಾವಣೆ ಬಳಿಕ ಈ ಯೋಜನೆಗಳನ್ನು ಪ್ರಾರಂಭಿಸಲಾಗುವುದು ಎಂಬುದಾಗಿ ಅವರು ಹೇಳಿದರು.
ನಗರದ ನೆಹರೂ ಕ್ರೀಡಾಂಗಣದ ಅಭಿವೃದ್ದಿ ಗಾಗಿ ಮೊದಲ ಹಂತದ 38 ಲಕ್ಷ ರೂಪಾಯಿಗಳ ಬಿಡುಗಡೆ ಮಾಡಿಕೊಡುತ್ತೇನೆ, ಶಿಥಿಲ ಸ್ಥಿತಿಯಲ್ಲಿರುವ ಹಳೆಯ ಉದು೯ ಶಾಲೆ ಉರುಳಿಸುವಿಕೆಯ ಬಗ್ಗೆಯೂ ಶೀಘ್ರವೇ ತೀಮಾ೯ನ ಕೈಗೊಳ್ಳುತ್ತೇನೆ ಎಂಬ ಭರವಸೆ ನೀಡಿದರಲ್ಲದೆ, ಸುಣ್ಣಗಾರ ಸಕ೯ಲ್ ನ ಬಳಿ ಹಂಸ್ ಹಾಕಿಸಿ ಕೊಡುವ ಕುರಿತು 3-4 ದಿನಗಳಲ್ಲಿ ಈ ಕೆಲಸ ಪೂಣ೯ಗೊಳಿಸಿ ಕೊಡಿ ಎಂಬುದಾಗಿ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದರು.
ಈ ಸಭೆಯಲ್ಲಿ ನಗರಸಭೆ ಆಯುಕ್ತರಾದ ಟಿ.ಲೀಲಾವತಿ, ತಾಲ್ಲೂಕು ಆರೋಗ್ಯ ಅಧಿಕಾರಿ ವೆಂಕಟೇಶ್, ಡಿ.ಟಿ.ಶ್ರೀನಿವಾಸ್, ಜಿ.ಪಂ.ಸದಸ್ಯೆ ರಾಜೇಶ್ವರಿ, ಎಲ್.ಎನ್.ವೆಂಕಟೇಶ್, ಬಿ.ಕೆ.ಕರಿಯಪ್ಪ, ಕೇಶವಮೂರ್ತಿ, ವೈ.ಎಸ್.ಪಿ ರೋಶನ್ ಜಮೀರ್, ಸಿಪಿಐ ರಾಘವೇಂದ್ರ, ಸೇರಿದಂತೆ ತಾಲ್ಲೂಕಿನ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published.

Send this to a friend