ಚಿತ್ರದುರ್ಗ : ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ವೇಗವಾಗಿ ಹರಡುತ್ತಿದ್ದು, ಮಾಸ್ಕ್ ಧರಿಸದಿದ್ದಕ್ಕೆ ಪೋಲಿಸರು ದಂಡ ಹಾಕಿದ್ದಾರೆ ಎಂದು ನಮಗೆ ಕರೆ ಮಾಡಬೇಡಿ ಎಂದು ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಸಹ ಕೋವಿಡ್ ಪಾಸಿಟಿವ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಿರಿಯೂರು ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಕೊರೋನಾ ವೈರಸ್ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ
ಜಾಗೃತಿ ಜಾಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಾಲೂಕಿನ ಜನರು ಎಚ್ಚೆತ್ತುಕೊಳ್ಳದ ದೃಷ್ಟಿಯಿಂದ ಹಾಗೂ ಸರ್ಕಾರದ ಕಾನೂನಿನ ಅಡಿಯಲ್ಲಿ ಪೋಲಿಸ್ ಅಧಿಕಾರಿಗಳು ಮಾಸ್ಕ್ ಧರಿಸದೆ ಸಂಚರಿಸುವ ಸಾರ್ವಜನಿಕರಿಗೆ ದಂಡ ವಿಧಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ಹಾಗಾಗಿ ನೀವು ನಮಗೆ ಕರೆ ಮಾಡಬೇಡಿ ಎಂದರು.
ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳಿ, ಸ್ಯಾನಿಟರಿ ಬಳಸಿ, ಶುಚಿತ್ವಕ್ಕೆ ಹೆಚ್ಚು ಗಮನ ಕೊಡಬೇಕು. ಆರೋಗ್ಯಕ್ಕಿಂತ ದೊಡ್ಡ ಪಾತ್ರ ಬೇರೆ ಯಾವುದು ಇಲ್ಲ. ಪೋಲಿಸರು ದುರುದ್ದೇಶದಿಂದ ದಂಡ ವಸೂಲಿ ಮಾಡುತ್ತಿಲ್ಲ, ಸಾರ್ವಜನಿಕರು ಪೈನ್ ಹಾಕುವುದಕ್ಕೆ ಅವಕಾಶ ಕೊಡಬಾರದು, ಆರೋಗ್ಯದ ದೃಷ್ಟಿಯಿಂದ ದಂಡ ಹಾಕುತಿದ್ದಾರೆ ಎಂದು ತಿಳಿಸಿದರು.
ದೇಶ ಮತ್ತು ರಾಜ್ಯದಲ್ಲಿ ಇಷ್ಟೇಲ್ಲಾ ಅನಾಹುತ ಆಗುತ್ತಿದ್ದರು ನಾಗರೀಕರು ಇನ್ನು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ” ಹಬ್ಬ ಮಾಡ್ಬೇಕು, ಜಾತ್ರೆ ಮಾಡ್ಬೇಕು, ನಾಟಕ ಮಾಡ್ಬೇಕು ಅಂತ ಅನುಮತಿ ಕೊಡಿ ಎಂದು ಅರ್ಜಿಗಳನ್ನು ತಗೊಂಡು ಬರ್ತಿರಾ ಎಂದರು. ನಿಮ್ಮ ಜೀವನ ಮುಖ್ಯ ಬಿಟ್ರೆ ಬೇರೆ ಯಾವುದು ದೊಡ್ಡದಲ್ಲ. ಆಗಾಗಿ ಸರ್ಕಾರ ಹೇಳಿರುವ ನಿಯಮಗಳನ್ನು ಪಾಲಿಸಿ ಎಂದರು. ಇದೇ ವೇಳೆ ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಸಾರ್ವಜನಿಕರಿಗೆ ಶಾಸಕರು ಮಾಸ್ಕ್ ವಿತರಿಸಿ, ಕೊರೋನಾ ನಿಮಯ ಪಾಲಿಸುವಂತೆ ಬುದ್ಧಿ ಹೇಳಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ರಾಜೇಶ್ವರಿ, ನಗರಸಭೆ ಅಧ್ಯಕ್ಷೆ ಶಂಶುನ್ನಿಸಾ, ಪ್ರಕಾಶ್, ಚಿತ್ರಜಿತ್ ಯಾದವ್, ಎಂ.ಡಿ. ಸಣ್ಣಪ್ಪ, ಪೌರಾಯುಕ್ತೆ ಟಿ. ಲೀಲಾವತಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.