ಎಲ್ಲಾ ವರ್ಗದವರ ಸಮಗ್ರ ಅಭಿವೃದ್ದಿಗೆ ಇಚ್ಚಾಸಕ್ತಿ ತೋರಿಸಿ ಬದ್ದತೆ ತೋರುವೆ : ಶಾಸಕಿ ಕೆ ಪೂರ್ಣಿಮಾ .

ಹಿರಿಯೂರು : ಅಭಿವೃದ್ಧಿಯಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಸರಿದಿದ್ದ ಕ್ಷೇತ್ರದಲ್ಲಿ ಏನಾದರೂ ಅಭಿವೃದ್ಧಿ ಕಾಣಬೇಕಾದರೆ ಎಲ್ಲಾ ವರ್ಗದ ಜನರ ಆಶೀರ್ವಾದವೇ ಕಾರಣ ಆಗಿರುವುದರಿಂದ ಎಲ್ಲರ ಹಿತಕಾಯಲು ಇಚ್ಚಾಸಕ್ತಿ ಮತ್ತು ಬದ್ದತೆ ತೋರುವೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು. ಅವರು ಇಂದು ನಗರದ ಶಾಸಕರ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣದಲ್ಲಿ ಒಬ್ಬ ವ್ಯಕ್ತಿ, ಕುಟುಂಬ, ಒಂದು ರಾಜ್ಯದ ಸುಬಿಕ್ಷತೆಗೆ ಹೇಗೆ ನಡೆದುಕೊಂಡ ಹೋಗಬೇಕು ಎಂಬ ಅಂಶ ಅಡಗಿದೆ. ಆ ದಿಸೆಯಲ್ಲಿ ಜನರಿಂದ ಆಯ್ಕೆಯಾದ ನಾವು ಮಹರ್ಷಿ ವಾಲ್ಮೀಕಿ ರಂತಹ ಮಹಾತ್ಮರ ಆದರ್ಶದಂತೆ ಅಭಿವೃದ್ಧಿಗೆ ಬದ್ಧರಾಗಿರುವುದಾಗಿ ತಿಳಿಸಿದರು.
ಪ್ರತಿಯೊಂದು ಗ್ರಾಮಕ್ಕೆ ಮೂಲಭೂತ ಸೌಕರ್ಯಕ್ಕೆ ವಿಶೇಷ ಅನುದಾನ, ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಸೂರು ಕಲ್ಪಿಸಲು ಸುಮಾರು ಎರಡೂವರೆ ಸಾವಿರ,ಹಿಂದುಳಿದ ವರ್ಗಗಳ ವಸತಿ ರಹಿತರಿಗೆ ಎರಡು ಸಾವಿರ ಮನೆಗಳ ಮಂಜೂರಾತಿಗೆ ಸಮ್ಮತಿ ದೊರೆತಿದೆ ಎಂದರು. ವರುಣನ ಕೃಪೆ ಹಾಗೂ ಬಿಜೆಪಿ ಸರ್ಕಾರದ ಇಚ್ಚಾಸಕ್ತಿಯ ಫಲವಾಗಿ ವಿ.ವಿ.ಸಾಗರಕ್ಕೆ ನೀರು ಹರಿದಿದ್ದು ತಾಲ್ಲೂಕಿನ ರೈತರು ಉತ್ತಮವಾದ ಬೆಳೆ ಬೆಳೆಯಲು ಸಹಕಾರಿಯಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ, ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆ ಸುಮೂರು ಆರುನೂರು ಕೋಟೆ ಅನುದಾನ ಹರಿದು ಬಂದಿದ್ದು ಅಭಿವೃದ್ಧಿಯಲ್ಲಿ ಕ್ಷೇತ್ರವು ಹಿಂದೆ ಬೀಳಲು ಬಿಡುವುದಿಲ್ಲ ಎಂದರು.
ಎಲ್ಲಾ ವರ್ಗದವರ ಅಭಿವೃದ್ಧಿ ನಿಗಮದ ರಾಜ್ಯ ಕಛೇರಿಗೆ ಸಂಬಂಧಿಸಿದಂತೆ ತಾಲ್ಲೂಕು ಮಟ್ಟದಲ್ಲಿ ಕಛೇರಿ ಪ್ರಾರಂಭಕ್ಕೆ ಸಚಿವರು ಹಾಗೂ ಮುಖ್ಯ ಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಹಾಗೂ ಪರಿಶಿಷ್ಟ ಪಂಗಡಗಳು ಹೆಚ್ಚು ಇರುವ ಗ್ರಾಮಗಳಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ರಾಜೇಶ್ವರಿ, ಬಿಜೆಪಿ ಮುಖಂಡರಾದ ಬಿ ಆರ್ ಮಂಜುನಾಥ, ಎಂ.ಎಸ್ ರಾಘವೇಂದ್ರ, ನಗರಸಭೆ ಮಾಜಿ ಅಧ್ಯಕ್ಷೆ ಟಿ. ಮಂಜುಳ, ಕೆ.ತಿಮ್ಮರಾಜ, ಗೊಲ್ಲ ಸಂಘದ ಅಧ್ಯಕ್ಷ ಆರ್ ರಂಗಸ್ವಾಮಿ, ಲೋಕೇಶ್, ಬಿಕೆ ಕರಿಯಪ್ಪ, ಸಿ.ಗೋಪಾಲಪ್ಪ, ಬಸವರಾಜ ನಾಯಕ, ನಗರಸಭೆ ಸದಸ್ಯ ಪಲ್ಲವ, ಬಾಲಕೃಷ್ಣ, ಚಿರಂಜೀವಿ ಸರವಣ, ಕದ್ರುಗಣೇಶ್, ಡಿ.ಗಂಗಾಧರ, ಶೋಭಾ, ಕೇಶವಮೂರ್ತಿ, ಮಾಜಿ ಬಿಜೆಪಿ ಅಧ್ಯಕ್ಷರಾದ ಎಂ.ವಿ.ಹರ್ಷ, ಕಬಡ್ಡಿ ಶ್ರೀನಿವಾಸ, ಹರೀಶ್ ಮಂಜು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published.

Send this to a friend