ಹಿರಿಯೂರು : ಜೀವನ ರೂಪಿಸಿಕೊಳ್ಳಲು ಮಹಿಳೆಯರು ಇತರರ ಮೇಲೆ ಅವಲಂಬನೆಯಾಗದೆ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬೇಕು ಎಂದು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು. ತಾಲೂಕಿನ ಬಿದರಿಕೆರೆ ಗ್ರಾಮದಲ್ಲಿ ಸಂಬ್ರಮ್ ಆಗ್ರೋಟಿಕ್ ಫಾರಂ ಹಾಗೂ ಚಿತ್ರದುರ್ಗ ಡಾನ್ ಬೋಸ್ಕೋ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಸಾಯ ಸಂಘದ 50 ಜನ ಮಹಿಳೆಯರಿಗೆ ಕುರಿ, ಮೇಕೆ ಸಾಕಾಣಿಕೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಪಾತ್ರ ಅಪಾರವಾಗಿದೆ. ಅನಾದಿಕಾಲದಿಂದಲೂ ಕುರಿ, ಮೇಕೆ ಸಾಕಾಣಿಕೆ ಒಂದು ರೂಢಿ ಪದ್ದತಿಯಾಗಿದ್ದು ಇಂದಿಗೂ ಸಹ ಜೀವಂತ ಪರಂಪರೆಯ ಉಳಿದುಕೊಂಡು ಬಂದಿದೆ. ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ, ಹೊರರಾಜ್ಯ ತಳಿಗಾದ ನಾರಿ ಸುವರ್ಣ, ಬ್ರಿಟಲ್, ಜಮುನಾ ಪುರಿ, ನಂದಿ ದುರ್ಗ, ಬೋಯರ್ ಈಗೆ ಹತ್ತಾರು ಕುರಿ,ಮೇಕೆಯ ತಳಿಯು ಸಾಕಾಣಿಕೆಯ ಮೂಲಕ ಹೆಚ್ಚು ಲಾಭದಾಯಕವಾಗಿರುತ್ತದೆ ಎಂದರು. ಆಕಸ್ಮಿಕವಾಗಿ ಮೃತ ಪಟ್ಟ ಕುರಿ, ಮೇಕಗಳಿಗೆ ಸರ್ಕಾರದಿಂದ ಪರಿಹಾರ ನೀಡುವಂತೆ ಅಧಿವೇಶನದಲ್ಲಿ ಸರ್ಕಾರವನ್ನು ಗಮನ ಸೆಳೆಯಲಾಗಿದ್ದು, ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು ಅದರಂತೆ ಚಿತ್ರದುರ್ಗ ಜಿಲ್ಲೆಗೆ ಸುಮಾರು ಎರಡುವರೆ ಕೋಟಿ ಹಣ ಬಿಡುಗಡೆಗೊಂಡಿದೆ ಎಂದು ತಿಳಿಸಿದರು. ಡಾನ್ ಬೋಸ್ಕೋ ಸಂಸ್ಥೆಯ ಫಾದರ್ ಜೋಸೆಫ್ ಮಾತಾಡಿ ಜಿಲ್ಲೆಯ ಎರಡು ತಾಲೂಕಿನಲ್ಲಿ 2450 ಮಹಿಳಾ ಸ್ವಸಹಾಯ ಸಂಘ ಗುಂಪುಗಳಾಗಿ ಪರಿವರ್ತಿಸಿ ನಮ್ಮ ಸಂಸ್ಥೆಗಳ ಮೂಲಕ ಹೆಣ್ಣು ಮಕ್ಕಳು ಸ್ವಾವಲಂಬನೆ ಬದುಕಿಗೆ ಡಾನ್ ಬೋಸ್ಕೋ ಸಂಸ್ಥೆಯು ಸಹಕಾರಿಯಾಗಿದೆ. ಕೋವಿಡ್ ನಿಂದ ಮೃತಪಟ್ಟು ಪತಿಯರನ್ನು ಕಳೆದುಕೊಂಡಿರುವ ಮಹಿಳೆಯರ ಬದುಕಿಗೆ ಈ ಸಂಸ್ಥೆ ಆಸರೆಯಾಗಿದೆ. ಅಂತಹ ಬಡ ಮಹಿಳೆಯರು
ಮುಂದಿನ ದಿನಗಳಲ್ಲಿ ಹೆಚ್ಚಿನ ಯೋಜನೆಯ ಕುರಿ, ಮೇಕೆಗಳನ್ನು ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸಿಕೊಳ್ಳಬೇಕು ಎಂದರು. ಕಸವನಹಳ್ಳಿ ರಮೇಶ್, ಕೆ.ಟಿ. ಶ್ರೀನಿವಾಸ್, ಡಾ. ತಿಪ್ಪೇಸ್ವಾಮಿ ಮಾತಾಡಿದರು. ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಶು ವೈದ್ಯಾಧಿಕಾರಿ ಹನುಮಪ್ಪ, ಗ್ರಾಂ.ಪ. ಅಧ್ಯಕ್ಷ ರಾಮಚಂದ್ರಪ್ಪ, ಉಪ್ಪಾರ ಹಳ್ಳಿ ರಂಗಸ್ವಾಮಿ, ಪಾಂಡುರಂಗಪ್ಪ, ಚಂದ್ರಶೇಖರ್, ಬೈಲಪ್ಪ, ಸ್ವಸಾಯ ಸಂಘದ ಮಹಿಳೆಯರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.