ಯೋಗಾಭ್ಯಾಸದಿಂದ ಮಾನಸಿಕ ಒತ್ತಡ ಇರುವುದಿಲ್ಲ : ಸಿಪಿಐ ಶಿವಕುಮಾರ್

ಹಿರಿಯೂರು ಜುಲೈ 12 : ಸತತ ಯೋಗಭ್ಯಾಸದಿಂದ ಮಾನಸಿಕ ಒತ್ತಡ ದೂರಾಗಿ ಕರ್ತವ್ಯದಲ್ಲಿ ಲವಲವಿಕೆ ಮೂಡುವುದು ಎಂದು ನಗರ ಠಾಣೆ ಇನ್ಫೆಕ್ಟರ್ ಶಿವಕುಮಾರ್ ಅಭಿಪ್ರಾಯಪಟ್ಟರು.ಅವರು ಭಾನುವಾರ ನಗರದ ಪಾರಿಜಾತ ಕಲ್ಯಾಣ ಮಂಟಪದಲ್ಲಿ ಪೋಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಏರ್ಪಡಿಸಲಾಗಿದ್ದ ಆನ್ ಲೈನ್ ಯೋಗಭ್ಯಾಸದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

“ಪೋಲೀಸ್ ವೃತ್ತಿಯು ಸಹಜವಾಗಿ ಒತ್ತಡದಿಂದ ಕೂಡಿದ್ದು ಅದರಿಂದ ಹೊರಬಂದು ಉತ್ಸಾಹ ಹಾಗೂ ಲವಲವಿಕೆಯಿಂದ ಕೆಲಸ ಮಾಡಬೇಕಾದರೇ ಧ್ಯಾನ,ಪ್ರಾಣಯಾವ,ಯೋಗಭ್ಯಾಸದಂತಹ ಹವ್ಯಾಸಗಳನ್ನು ಪೋಲೀಸ್ ಸಿಬ್ಬಂದಿ ಬೆಳಸಿಕೊಳ್ಳಬೇಕು” ಎಂದರು. “ಸೋಂಕಿನ ಹಾಗೂ ಮಾರಣಾಂತಿಕ ರೋಗ ರುಜಿನಗಳು ಹತ್ತಿರ ಸುಳಿಯದಂತೆ ತಡೆಯಲು ಯೋಗಭ್ಯಾಸ ಸಹಕಾರಿಯಾಗಲಿದ್ದು ಪೋಲೀಸ್ ಸಿಬ್ಬಂದಿಗಳು ಆರೋಗ್ಯದ ದೃಷ್ಟಿಯಿಂದ ದಿನದ ಒಂದೆರಡು ಗಂಟೆಗಳ ಕಾಲ ಈ ರೀತಿಯ ದೈಹಿಕ ಕಸರತ್ತು ನಡಿಸಬೇಕು ” ಎಂದರು.
ಗ್ರಾಮಾಂತರ ಠಾಣೆಯ ಇನ್ಫೆಕ್ಟರ್ ರಾಘವೇಂದ್ರ ಮಾತನಾಡಿ “ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿಯ ಭಾಗವಾಗಿರುವ ಯೋಗಭ್ಯಾಸದಿಂದ ಭಾರತೀಯರು ದೀರ್ಘಕಾಲ ಬಾಳುವುದರ ಜೊತೆಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಡವಾಗಿರುವುದನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದು ಎಂದರು. ” ಮಾನ್ಯ ಪೋಲೀಸ್ ಅಧೀಕ್ಷಕರಾದ ರಾಧಿಕ ಮೇಡಂ ರವರು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮಾನಸಿಕ ನೆಮ್ಮದಿ ಹಾಗೂ ಆರೋಗ್ಯ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮೂಲಕ ಕರ್ತವ್ಯದಲ್ಲಿ ಕ್ಷಮತೆ ಹಾಗೂ ದಕ್ಷತೆ ಹೆಚ್ಚಿಸಲು ಕಾರಣೀಭೂತರಾಗಿದ್ದಾರೆ ಎಂದರು. ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರೂ ಇಂತಹ ಕಾರ್ಯಕ್ರಮಗಳ ಮೂಲಕ ಉತ್ತಮ ಹವ್ಯಾಸಗಳನ್ನು ಬೆಳಸಿಕೊಂಡು ಆರೋಗ್ಯಕರ ಜೀವನ ನಡೆಸಬೇಕು” ಎಂದರು
ಕಾರ್ಯಕ್ರಮದಲ್ಲಿ ಪಿಎಸ್ಐಗಳಾದ ಕೆ.ಅನುಸೂಯ, ಡಿ.ಜಿ.ಪರಮೇಶ್,ಶಶಿಕಲಾ,ಮಂಜುನಾಥ್,ಕ್ರೈ ಸಬ್ ಇನ್ಫೆಕ್ಟರ್ ಎಸ್. ಅನುಸೂಯ, ಅಶ್ವಿನಿ,ಎಎಸ್ಐಗಳಾದ ರಾಘವರೆಡ್ಡಿ,ವೆಂಕಟೇಶ್,ಪ್ರಭಾಕರ್ ರೆಡ್ಡಿ, ನಿರಂಜನ್ ಮೂರ್ತಿ,ತಿಪ್ಪೇಸ್ವಾಮಿ, ಮಾಧುರಾವ್, ಸಿಬ್ಬಂದಿಗಳಾದ ಶಿವಮೂರ್ತಿ,ಕುಮಾರ್,ತಿಮ್ಮರಾಯಪ್ಪ,ಖಲೀಲ್,ಹನುಮಂತಪ್ಪ,ಅನಿಲ್,ಸತೀಶ್, ರವಿ,ನಳಿನ,ವಿಜಯ ಕುಮಾರಿ,ಮಂಜುಳ,ಸುಷ್ಮ,ಸಂತೋಷ್,ಕಮಲಾಕರ್,ದೇವೇಂದ್ರಪ್ಪ,ಅನೀಫ್, ಮಹೇಂದ್ರ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published.

Send this to a friend