ಹಿರಿಯೂರು : ವಿಷಪೂರಿತ ಮೇವು ತಿಂದು 40 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದ ಘಟನೆ ತಾಲೂಕಿನ ಸರಸ್ವತಿಹಟ್ಟಿ ಹಾಗೂ ಹೊಸಹಟ್ಟಿ ಗ್ರಾಮದಲ್ಲಿ ಗುರುವಾರ ಸಂಜೆ ಘಟನೆ ನಡೆದಿತ್ತು. ” ಬಿಳಿ ಜೋಳದ ಸೆಪ್ಪೆಯ ಚಿಗುರು” ತಿಂದಿದ್ದ 300 ಕುರಿಗಳಲ್ಲಿ 258 ಕುರಿಗಳಿಗೆ ಚಿಕಿತ್ಸೆ ನೀಡಿದ್ದರು. ಆದರೆ 40 ಕ್ಕೂ ಹೆಚ್ಚು ಕುರಿಗಳು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದವು. ಕುರಿ ಕಳೆದುಕೊಂಡ ಕುರಿಗಾಹಿಗಳಾದ ಚಿಣ್ಣಪ್ಪ, ಕೆಂಚಪ್ಪ, ಶಿವಮ್ಮ ಇವರ ಆಕ್ರಂದನ ಮುಗಿಲು ಮುಟ್ಟಿತ್ತು. ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ವೈಯಕ್ತಿಕವಾಗಿ ಆಪ್ತ ಸಹಾಯಕ ಕಾರ್ಯದರ್ಶಿಯ ಮೂಲಕ 60 ಸಾವಿರ ಪರಿಹಾರ ನೀಡಿದ್ದಾರೆ. ಸಮುದಾಯದ ಮುಖಂಡ ಹಾಗೂ ಮಾಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎನ್. ಆರ್. ಲಕ್ಷ್ಮೀಕಾಂತ್ 50 ಸಾವಿರ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ದೊಡ್ಡ ಮಲ್ಲಯ್ಯ ತಂಡದವರು 10 ಸಾವಿರ ವೈಯಕ್ತಿಕ ಪರಿಹಾರ ನೀಡಿ, ಕುರಿಗಾಹಿಗಳಿಗೆ ಸಾಂತ್ವನ ಹೇಳಿದ್ದಾರೆ.
ಹಿರಿಯೂರು ತಹಶೀಲ್ದಾರ್ ಜಿ. ಸತ್ಯನಾರಾಯಣ, ಪಿ.ಆರ್. ದಾಸ್, ರಂಗಯ್ಯ, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.