ಚಿತ್ರದುರ್ಗ : ನಮ್ಮ ಸರ್ಕಾರ ಇದ್ದಾಗ ಬೈ ಎಲೆಕ್ಷನ್ ನಲ್ಲಿ ಗೆದ್ದಿದ್ವಿ, ಆಗ ಇವನು ಏನ್ ಆಗಿದ್ನಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಜಿಲ್ಲೆಯ ಹಿರಿಯೂರು ನಗರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಅಧಿಕಾರ ಇದ್ದಾಗ ಎಲ್ಲಾ ಬೈ ಎಲೆಕ್ಷನ್ ಗೆದ್ದಿದ್ದೇವು, ಆಗ ಇವನೇನು ಆಗಿದ್ದನಂತೆ (ಕಟೀಲ್), ಇಲಿ ಬಿಲ ಸೇರಿಕೊಂಡಿದ್ದನ ಇವನು ಎಂದರು. ನಳೀನ್ ಕುಮಾರ್ ಕಟೀಲ್ ಇನ್ನೂ ಅಪ್ರಬುದ್ದ ರಾಜಕಾರಣಿ ಬಿಜೆಪಿ ಬೈ ಎಲೆಕ್ಷನ್ ಸೋತು ಎಲ್ಲಿಯಾದರೂ ರಾಜೀನಾಮೆ ನೀಡಿದ್ದಾರ.? ದೆಹಲಿಯಲ್ಲಿ ಪ್ರದಾನಿ ಪ್ರಚಾರ ಮಾಡಿದ್ದರು, ಸೋತರು ರಾಜೀನಾಮೆ ಕೊಟ್ಟಿದ್ದಾರ? ಎಂದಿದ್ದಾರೆ. ಇನ್ನು ಸಿದ್ದರಾಮಯ್ಯ ಅಯೋಗ್ಯ ಎಂದ ಸಚಿವ ಕೆ.ಎಸ್. ಈಶ್ವರಪ್ಪ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದು ಮಂತ್ರಿಯಾಗಲು ಈಶ್ವರಪ್ಪ ಅಯೋಗ್ಯ, ಮಂತ್ರಿಯಾಗಲು ನಾಲಾಯಕ್ ಎಂದು ವ್ಯಂಗ್ಯವಾಡಿದರು.