ನಾಳೆ ಸಕಾಲ ಸಪ್ತಾಹ : ತಹಶೀಲ್ದಾರ್ ಜಿ ಎಚ್. ಸತ್ಯನಾರಾಯಣ ಹೇಳಿಕೆ.

ಹಿರಿಯೂರು : ನಾಗರಿಕರಿಗೆ ನಿಗದಿತ ಕಾಲಮಿತಿಯಲ್ಲಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸಕಾಲ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಕಂದಾಯ ಇಲಾಖೆಯ ಒಟ್ಟು 79ಕ್ಕೂ ಹೆಚ್ಚು ಸೇವೆಗಳು ಸಕಾಲ ವ್ಯಾಪ್ತಿಯಡಿ ತರಲಾಗಿದೆ ಎಂದು ತಶೀಲ್ದಾರ್ ಜಿ.ಎಚ್ ಸತ್ಯನಾರಾಯಣ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಸೇವೆಗಳನ್ನು ಶೀಘ್ರವಾಗಿ ಒದಗಿಸುವ ಸಲುವಾಗಿ ವಿವಿಧ ಇಲಾಖೆಗಳಲ್ಲಿ ಸಕಾಲ ಸಪ್ತಾಹವನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಕಂದಾಯ ಇಲಾಖೆಯಲ್ಲಿ ಬರುವ ಎಲ್ಲಾ ಅಧೀನ ಇಲಾಖೆಗಳ ಕಚೇರಿಗಳಲ್ಲಿ ಸೋಮವಾರದಿಂದ ಡಿಸೆಂಬರ್ 5 ರವರೆಗೆ ಸಕಾಲ ಸಪ್ತಾಹ ಆಚರಿಸಲಾಗುತ್ತಿದೆ. ಹೊಸದಾಗಿ ಸ್ವೀಕರಿಸುವ ಅರ್ಜಿಗಳನ್ನು ಸಕಾಲದಡಿ ಸ್ವೀಕರಿಸಿ ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ. ಇದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದ್ದು, ಸರ್ಕಾರಿ ಕಚೇರಿಗಳಲ್ಲಿ ಸಕಾಲ ಸೇವೆಗಳ ವಿವರಗಳನ್ನೊಳಗೊಂಡ ಬ್ಯಾನರ್ ಗಳನ್ನು ಅಳವಡಿಸಲಾಗುತ್ತಿದೆ.
ಭಿತ್ತಿ ಪತ್ರಗಳನ್ನು ಹಂಚಲಾಗುತ್ತಿದೆ ಎಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

Leave a Reply

Your email address will not be published.

Send this to a friend