ಚಿತ್ರದುರ್ಗ : ದಕ್ಷಿಣ ಕಾಶಿ ಎಂದು ಪ್ರಸಿದ್ದಿ ಪಡೆದಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಶ್ರೀ ತೇರುಮಲ್ಲೇಶ್ವರನ ಬ್ರಹ್ಮ ರಥೋತ್ಸವ ಬಹಳ
ವಿಜೃಂಭಣೆಯಿಂದ ಜರುಗಿತು. ಸ್ವಾಮಿಯ
ರಥೋತ್ಸವಕ್ಕೆ ತಹಶೀಲ್ದಾರ್ ಜಿ.ಎಚ್. ಸತ್ಯನಾರಾಯಣ, ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ಚಾಲನೆ ನೀಡಿದರು. ರಥೋತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ಹೂ ಪುಷ್ಪಾರ್ಚನೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಜಿಲ್ಲಾಡಳಿತ ಅನುಮತಿ ಕೊಡಲಿಲ್ಲ ಎನ್ನಬಹುದು. ಇನ್ನು ತೆರುಮಲ್ಲೇಶ್ವರ ಸ್ವಾಮಿಯ ಮುಕ್ತಿಭಾವುಟವನ್ನು ಹರಾಜಿನಲ್ಲಿ 5 ಲಕ್ಷಕ್ಕೆ ಆಟ್ಟಿಕಾ ಗೋಲ್ಡ್ ಪ್ಯಾಲೇಸ್ ಬೊಮ್ಮನಹಳ್ಳಿ ಬಾಬು ಪಡೆದುಕೊಂಡರು.
ತೇರುಮಲ್ಲೇಶ್ವರ ದೇಗುಲ ಮುಂಭಾಗದಿಂದ ರಥೋತ್ಸವ ಸಿದ್ದನಾಯಕ ಸರ್ಕಲ್ ನವರೆಗೂ ಭಕ್ತರು ಎಳೆದರು. ಸ್ವಾಮಿಗೆ ಭಕ್ತರು ಬಾಳೆ ಹಣ್ಣು ಎಸೆದು ಪುಲಕಿತರಾದರು. ರಥೋತ್ಸವದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಮಜ್ಜಿಗೆ, ಪಾನಕ, ಕೊಸಂಬರಿ, ಉಪಹಾರಾದ ವ್ಯವಸ್ಥೆ ಮಾಡಿದ್ದರು. ಜಾತ್ರೆಯಲ್ಲಿ ಮಾಜಿ ಸಚಿವ ಡಿ. ಸುಧಾಕಾರ್, ಡಿ.ಟಿ.ಶ್ರೀನಿವಾಸ್, ಸಿ.ಬಿ. ಪಾಪಣ್ಣ, ನಾಗೇಂದ್ರನಾಯ್ಕ ಸೇರಿದಂತೆ ಸುಮಾರು 2 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ವಿವಿಧ ಜಿಲ್ಲೆಯ ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.
ಚುನಾವಣೆಯಲ್ಲಿ ಸ್ಪರ್ಧೆ :ಹೆಲಿಕಾಪ್ಟರ್ ಮೂಲಕ ಶ್ರಿ ತೇರುಮಲ್ಲೆಶ್ವರ ಸ್ವಾಮಿಗೆ ಹೂ ಪುಷ್ಪಾರ್ಚನೆ ಮಾಡಬೇಕೆಂಬ ಹರಕೆ ಇತ್ತು ಆದರೆ ಸರ್ಕಾರ ಅನುಮತಿ ಕೊಡಲಿಲ್ಲ. ಕೈಯಿಂದಲೇ ಹೂವನ್ನು ಸ್ವಾಮಿಗೆ ಅರ್ಪಿಸಿದ್ದೆನೆ. ನನಗೆ ಜಾತ್ರೆಯಲ್ಲಿ ಭಾಗವಹಿಸಿದ್ದಕ್ಕೆ ತುಂಬಾ ಖುಷಿಯಾಗಿದೆ ಎಂದು ಬೊಮ್ಮನಹಳ್ಳಿ ಬಾಬು ತಿಳಿಸಿದರು.
ಹಿರಿಯೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ವಾಮಿಯ ಆಶೀರ್ವಾದ ಇದ್ದರೆ ಖಂಡಿತ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರ ಒತ್ತಾಸೆ ಹಾಗೂ ಅಭಿಮಾನಿಗಳ ಮೇರೆಗೆ ಹಿರಿಯೂರು ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದ ಎಂದು ತಿಳಿಸಿದರು.