ಹಿರಿಯೂರು ( ಆಗಸ್ಟ್ ೧೫) : ಬ್ರಿಟಿಷರ ವಿರುದ್ಧ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ ಮಹಾತ್ಮಗಾಂಧಿ, ಭಗತ್ ಸಿಂಗ್, ಸಂಗೊಳ್ಳಿ ರಾಯಣ್ಣ, ಚಂದ್ರಶೇಖರ್ ಆಜಾದ್ ರಂತಹ ಮಹನೀಯರ ತ್ಯಾಗ, ಬಲಿದಾನಗಳಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಇಂತಹ ಮಹಾನ್ ಹೋರಾಟಗಾರರ ದೇಶಪ್ರೇಮ, ದೇಶಭಕ್ತಿಯನ್ನು ಇಂದು ನಾವೆಲ್ಲರೂ ಸ್ಮರಿಸಬೇಕು ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ಹೇಳಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 75 ನೇ ವರ್ಸದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ದೇಶದ 75 ನೇ ವರ್ಷದ ಅಮೃತ ಮಹೋತ್ಸವ ಸಂದರ್ಭ ನಮ್ಮ ತಾಲ್ಲೂಕಿಗೆ ಸುಖ-ಸಮೃದ್ಧಿಯನ್ನು ತಂದಿದ್ದು, ಇಂದು ವಾಣಿವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ 128 ಅಡಿ ತಲುಪಿದ್ದು, ತಾಲ್ಲೂಕಿನ ಜನರ ಹಾಗೂ ರೈತರ ಮೊಗದಲ್ಲಿ ಸಂತಸ, ಸಂಭ್ರಮ ಮನೆಮಾಡಿದೆ, ತಾಲ್ಲೂಕಿನ ಕೆರೆಕಟ್ಟೆಗಳು ತುಂಬಿ, ತೋಟ, ಹೊಲ, ಮನೆ-ಗದ್ದೆಗಳು ಅಚ್ಚಹಸಿರಿನಿಂದ ಕಂಗೊಳಿಸುವ ಮೂಲಕ ಮತ್ತೆ ತಾಲ್ಲೂಕಿಗೆ ಸಮೃದ್ಧಿಕಾಲ ಬರುತ್ತಿದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಪಿ.ಆರ್.ಸತೀಶ್ ಬಾಬು, ರೆಡ್ ಕ್ರಾಸ್ ನಿರ್ದೇಶಕ ಮಹಾಬಲೇಶ್ವರಶೆಟ್ಟಿ, ವಾಣಿವಿಲಾಸ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಮೊಹಸೀನಾ ಫಿರ್ದೋಸ್, ಶಿಕ್ಷಕರುಗಳಾದ ಉಮೇಶ್ ಯಾದವ್, ಶ್ರೀಮತಿ ಗಂಗಮ್ಮ, ಶ್ರೀಮತಿ ವಸಂತಾ, ಶ್ರೀಮತಿ ರಂಜಿತಾ, ಶ್ರೀಮತಿ ನಂದಿನಿ, ಶ್ರೀಮತಿ ತಿಪ್ಪಮ್ಮ, ಶ್ರೀಮತಿ ಭಾಗ್ಯ, ಅಂಬಿಕಾ, ಶ್ರೀಮತಿ ಹೇಮಲತಾ, ಶ್ರೀಮತಿ ಸಬೀಹಾ, ಶ್ರೀಮತಿ ರುಬೀನಾ, ಶ್ರೀಮತಿ ದಿವ್ಯಾ, ಶಿವರಾಜ್, ಜ್ಯೋತಿಕ, ಸತ್ಯಾ,ಸೇರಿದಂತೆ ಶಾಲಾಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.