ಆಂಜನೇಯ ಸ್ವಾಮಿ ದೇವಾಲಯದ ಹುಂಡಿ ಹಣ ಕಳವು
ಹಿರಿಯೂರು (ಆಗಸ್ಟ್ 19) : ಹಿರಿಯೂರು ನಗರದ ಜನನಿಬಿಡ ಪ್ರದೇಶವಾದ ನೆಹರು ವೃತ್ತದಲ್ಲಿ ಬಿಇಓ ಕಚೇರಿ ಪಕ್ಕದಲ್ಲಿ ನೆಲೆಸಿರುವ ಶ್ರೀ ಹೆಬ್ಬಾಗಿಲು ಆಂಜನೇಯ ಸ್ವಾಮಿ ದೇವಾಲಯದ ಹುಂಡಿಯನ್ನು ಗುರುವಾರ ರಾತ್ರಿ ಹೊಡೆದಿರುವ ಕಳ್ಳರು ಹುಂಡಿಯಲ್ಲಿರುವ ಹಣ ಮತ್ತು ದೇವಾಲಯದ ಪಾತ್ರೆಗಳನ್ನು ಸಹ ಕಳವು ಮಾಡಿರುತ್ತಾರೆ ಈ ಬಗ್ಗೆ ದೇವಾಲಯ ಟ್ರಸ್ಟ್ ಪದಾಧಿಕಾರಿಗಳು ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ. ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ದೇವಾಲಯದ ಹುಂಡಿಯಲ್ಲಿ ಹೆಚ್ಚು ಹಣ ಸಂಗ್ರಹವಾಗಿರಬಹುದು ಎಂದು ದೇವಾಲಯದ ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತು ಟ್ರಸ್ಟ್ ನ ಸದಸ್ಯರು ತಿಳಿಸಿದ್ದಾರೆ.