ಹಿರಿಯೂರು : ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ವಿಶ್ವಕರ್ಮ ಸಮಾಜಕ್ಕೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಬಾಬು ಪತ್ತಾರ್ ಹೇಳಿದರು.
ಹಿರಿಯೂರಿನಲ್ಲಿ ತಾಲೂಕು ಸಮಾಜದ ಮುಖಂಡರನ್ನು ಭೇಟಿ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಜನ ಸಂಖ್ಯೆ 30-35 ಲಕ್ಷ ಜನಸಂಖ್ಯೆ ಇದೆ. ನಮ್ಮ ಸಮಾಜದ ಹಿರಿಯರು. ಸ್ವಾಮೀಜಿಗಳು , ರಾಜಕೀಯ ಮುಖಂಡರ ಒಮ್ಮತದ ನಿರ್ಧಾರಕ್ಕೆ ಬಂದು ಮೀಸಲಾತಿ, ಹೆಚ್ಚಿನ ಹಣಕಾಸು ಮನವರಿಕೆ ಮಾಡಲಾಗುವುದು ಎಂದು ಹೇಳಿದರು. ಈಗಾಗಲೇ ಸರ್ಕಾರ ಕೂಡ ಸ್ಪಂದಿಸಿದೆ. ವಿಶ್ವಕರ್ಮ ಸಮಾಜಕ್ಕೆ ಇನ್ನೂ ಹೆಚ್ಚಿನ ಸಹಕಾರ ನೀಡಬೇಕು ಎಂದರು. ನಾನು ಕೂಡ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ತಿಳಿಸಿದರು. ನಮ್ಮಲ್ಲಿ ಪಂಚ ಕಸುಬಳಿವೆ. ಈ ಕಸುಬುದಾರರಿಗೆ ಸರ್ಕಾರ ಪ್ಯಾಕೇಜ್ ನೀಡಬೇಕು ಎಂದು ಅವರು ಮನವಿ ಮಾಡಿದರು.
ತಾಲೂಕು ವಿಶ್ವಕರ್ಮ ಸಮಾಜ ಅಧ್ಯಕ್ಷ ಸಿ. ನಾರಾಯಣಚಾರ್ ಮಾತಾನಾಡಿ ಈ ಬಾರಿ ಬಜೆಟ್ ನಲ್ಲಿ ನಮ್ಮ ತಾಲೂಕಿನ ಕಡುಬಡವರಿಗೆ, ನಿರ್ಗತಿಕರಿಗೆ ಹೆಚ್ಚಿನ ಅನುದಾನ ನೀಡಬೇಕು ಮತ್ತು ನಗರದ ಶ್ರೀ ಕಾಳಿಕಾಂಬ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ಕಳೆದ ಬಾರಿ ನಿಗಮದ ಅಡಿಯಲ್ಲಿ ನೀಡಿದ ಹಣವನ್ನು ಮನ್ನಾ ಮಾಡಬೇಕು ಎಂದರು. ಇದೇ ಸಂದರ್ಭದಲ್ಲಿ ನಿಗಮ ಮಂಡಳಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ನಗರಸಭೆ ಸದಸ್ಯ ಬಾಲಕೃಷ್ಣ, ನಗರಸಭೆ ಸುನೀಲ್ ಕುಮಾರ್, ಸತೀಶ್, ರಾಘವೇಂದ್ರ, ರಮೇಶ್, ರವಿ,ಗೋವಿಂದಚಾರ್, ಶ್ರೀಕಾಂತ್, ಗೋಪಾಲ್ ಚಾರ್, ಮಲ್ಲಿಕಾರ್ಜುನ ಪೃಥ್ವಿ ರಾಜ್, ಪೂಜಾರ್ ಮಲ್ಲೇಶ್, ಗೋಪಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.