ಶಾಸಕಿ ವಿರುದ್ಧ ಬಾಲೀಶ ಹೇಳಿಕೆ ನಿಲ್ಲಿಸಲಿ : ಕೇಶವಮೂರ್ತಿ.

ಹಿರಿಯೂರು ಸೆಪ್ಟೆಂಬರ್ 08 :ಗೌರವಾನ್ವಿತ ಮಾಜಿ ಸಚಿವರಾದ ಡಿ.ಸುಧಾಕರ್ ರವರು ಇತ್ತೀಚೆಗೆ ತಮ್ಮ ಸ್ವಂತ ವೆಚ್ಚದಲ್ಲಿ ವದ್ದಿಕೆರೆ ದೇವಸ್ಥಾನದ ಹೆಬ್ಬಾಗಿಲು ನಿರ್ಮಾಣದ ಶಂಕುಸ್ಥಾಪನೆ ಸಂದರ್ಭದಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂಬ ಹೇಳಿಕೆಯು ಅತ್ಯಂತ ಬಾಲೀಶ ಹಾಗೂ ಹತಾಶ ಮನೋಭಾವದಿಂದ ಕೂಡಿದೆ ಎಂಬುದಾಗಿ ಬಿಜೆಪಿ ಜಿಲ್ಲಾ ಸಹ ವಕ್ತಾರ ಕೇಶವ ಮೂರ್ತಿ ಟೀಕಿಸಿದ್ದಾರೆ.
ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರ ತರಹ ಮಾಜಿ ಸಚಿವರಿಗೆ ಏನಾದರೂ ರಾಜಕೀಯ ಇಚ್ಛಾಶಕ್ತಿ ಹಾಗೂ ಬದ್ದತೆ ಇದ್ದಿದ್ದರೇ ತಾಲ್ಲೂಕಿನ ರೈತರ ಹಿತ ಕಾಪಾಡಬಹುದಿತ್ತು, ವಾಣಿವಿಲಾಸ ಸಾಗರಕ್ಕೆ ಭದ್ರೆ ಮೂಲಕ ನೀರು ಹರಿಸುವ ಪ್ರಯತ್ನವನ್ನು ತಾವು ಸಚಿವರಾದಾಗ ಕಾರ್ಯಗತ ಮಾಡಿ, ಅದೆಷ್ಟೋ ರೈತರ ತೆಂಗು ಅಡಿಕೆ ದಾಳಿಂಬೆ ಬೆಳೆಗಳ ರಕ್ಷಿಸಬಹುದಿತ್ತು ಆಗ ನಿದ್ರಾ ವ್ಯವಸ್ಥೆಗೆ ಜಾರಿ ಈಗ ಕ್ಷೇತ್ರ ಎಲ್ಲಾ ಅಭಿವೃದ್ಧಿ ಕಂಡಿರುವಾಗ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರ ಅಭಿವೃದ್ಧಿ ಹೆಜ್ಜೆಗಳ ಕಂಡು ಬಾಲೀಶ ಹೇಳಿಕೆ ನೀಡುತ್ತಿರುವುದು ಅವರ ಹತಾಶೆಯ ಮನೋಭಾವ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

ಶಾಸಕಿಯಾಗಿ ಆಯ್ಕೆ ಆದ ಮೊದಲ ಅಧಿವೇಶನದಲ್ಲೇ ಕ್ಷೇತ್ರದಲ್ಲಿನ ರೈತ, ಜನಜಾನುವಾರು, ಬೆಳೆಗಳ ಹಿತ ಕಾಪಾಡಲು ಮುಖ್ಯವಾದ ನೀರಿನ ಸಮಸ್ಯೆ ಇಟ್ಟುಕೊಂಡು ವಿಧಾನಸಭಾ ಅಧಿವೇಶನದಲ್ಲೇ ಗುಡುಗಿದ್ದನ್ನು ಈ ಸಂದರ್ಭದಲ್ಲಿ ನಾನು ಅವರಿಗೆ ನೆನಪು ಮಾಡಿಕೊಡುವ ಅವಶ್ಯಕತೆ ಇದೆ ಹಾಗೆಯೇ ಅವರು ಶಾಸಕರಾಗಿ ಮಂತ್ರಿಯಾಗಿ ಹಿರಿಯೂರು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸೊಲ್ಲೆತ್ತಿದ್ದನ್ನು ನೋಡಲು ಜನತೆಯ ಪರವಾಗಿ ನೋಡಲು ಬಯಸುವೆ ಎಂದು ವ್ಯಂಗ್ಯವಾಡಿದ್ದಾರೆ.

ನಾನು ಹತ್ತು ವರ್ಷಗಳಲ್ಲಿ ಹಿರಿಯೂರು ಅಭಿವೃದ್ಧಿ ಮಾಡಿದೆ ಎಂಬ ಭ್ರಮೆಗೆ ಕ್ಷೇತ್ರದ ಮತದಾರ ನಿಮ್ಮನ್ನು ತಿರಸ್ಕಾರ ಮಾಡಿರುವುದಕ್ಕಿಂತ ಸಾಕ್ಷಿ ಬೇಕೇನು? ವಿರೋಧ ಪಕ್ಷದವರಾಗಿ ವಿರೋಧ ಮಾಡಬೇಕು ನಿಜ ಆದರೇ ಕ್ಷೇತ್ರದಲ್ಲಿ ತಾವು ಸಚಿವ ಹಾಗೂ ಶಾಸಕರಾಗಿ ಹತ್ತು ವರ್ಷಗಳ ಆಡಳಿತದಲ್ಲಿ ಹಾಗೂ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರ ಮೂರು ವರ್ಷಗಳಲ್ಲಿ ಕೇವಲ ಶಾಸಕಿಯಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ತುಲನೆ ಮಾಡುವ ಶಕ್ತಿ ಈ ಕ್ಷೇತ್ರದ ಜನ ಸಾಮಾನ್ಯರಿಗೂ ತಿಳಿದಿದೆ ಇನ್ನಾದರೂ ಇಂತಹ ಹತಾಶ ಬಾಲೀಶ ಹೇಳಿಕೆ ನೀಡದೆ ತಮ್ಮ ಕಾಂಗ್ರೆಸ್ ಮನಸ್ಥಿತಿಯನ್ನು ಬದಲಾಯಿಸಿಕೊಂಡು ಪ್ರಬುದ್ಧ ರಾಜಕಾರಣಿ ಆಗಲಿಎಂಬುದಾಗಿ ಬಿಜೆಪಿ ಸಹ ವಕ್ತಾರ ಕೇಶವಮೂರ್ತಿ ಹೇಳಿದ್ದಾರೆ.

Leave a Reply

Your email address will not be published.

Send this to a friend