ಮೃತದೇಹ ಪತ್ತೆ ಹಚ್ಚಿದ ಅಬ್ಬಿನಹೊಳೆ ಪೋಲಿಸರು

ಹಿರಿಯೂರು ( ಸೆ.೧೩) : ತಾಲೂಕಿನ ಅಬ್ಬಿನಹೊಳೆ ಕೆರೆಯಲ್ಲಿ ಎಮ್ಮೆ ಮೇಯಿಸಲು ಹೋಗಿ ಆಕಸ್ಮಿಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ವ್ಯಕ್ತಿಯನ್ನು ಅಬ್ಬಿನಹೊಳೆ ಪೋಲಿಸರು ತೆಪ್ಪದ ಮೂಲಕ ಶೋಧಕಾರ್ಯ ನೆಡೆಸಿದ ಮೃತ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ.

ಪಿಎಸ್ಐ ಪರುಶುರಾಮ್ ಎನ್ ಲಮಾಣಿ ನೇತೃತ್ವದಲ್ಲಿ
ಬೆಳಿಗ್ಗೆಯಿಂದಲೂ ಈ ಶೋಧ ಕಾರ್ಯ ನಡೆಸಿದ ಮೃತ ದೇಹವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಮೃತ ವ್ಯಕ್ತಿಯನ್ನು ಅಬ್ಬಿನಹೊಳೆ ಗ್ರಾಮದ 30 ವರ್ಷದ ಅಜಯ ಎಂದು ಗುರುತಿಸಲಾಗಿದೆ.ಅಬ್ಬಿನಹೊಳೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೋಲಿಸರ ಶೋಧಕಾರ್ಯಕ್ಕೆ ಗ್ರಾಮಸ್ಥರು ಕೈ ಜೋಡಿಸಿದ್ದಾರೆ.

ಈ ಸಂದರ್ಭದಲ್ಲಿ ಪಿಎಸ್ಐ ಪರುಶುರಾಮ ಎನ್ ಲಮಾಣಿ, ಸಿಬ್ಬಂದಿ ಕವಿರಾಜ್, ಗ್ರಾಮಸ್ಥರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.

Send this to a friend