ಗಣೇಶೋತ್ಸವದಲ್ಲಿ ಗಮನ ಸೆಳೆದ ಹತ್ಯೆಯಾದ ಹಿಂದೂ ಕಾರ್ಯಕರ್ತರ ಭಾವಚಿತ್ರ ಫೋಟೋ

ಚಿತ್ರದುರ್ಗ ( ಸೆ.೧೦) : ಹಿಂದೂ ಮಹಾಗಣಪತಿ ವಿಸರ್ಜನೆ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಹತ್ಯೆಯಾಗಿ ಪ್ರಾಣಬಿಟ್ಟಿದ್ದ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರ ಭಾವಚಿತ್ರವ ಹಾಗೂ ಸಾವರ್ಕರ್ ಪೋಟೋ ಮೆರವಣಿಗೆ ಎಲ್ಲರ ಗಮನ ಸೆಳೆಯಿತು.

ಅಂದಹಾಗೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಹಮ್ಮಿಕೊಂಡಿದ್ದ ಹಿಂದೂ ಮಹಾಗಣಪತಿ ವಿಸರ್ಜನೆ ಶೋಭಾಯಾತ್ರೆ ಕಾರ್ಯಕ್ರಮ ನಡೆಯಿತು.

ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶಿವು ಉಪ್ಪಾರ್, ಹರ್ಷ ಹಿಂದೂ, ಪ್ರವೀಣ್ ನೆಟ್ಟಾರು, ರುದ್ರೇಶ್ ಸೇರಿದಂತೆ ಸುಮಾರು 12 ಹಿಂದೂ ಕಾರ್ಯಕರ್ತರು ಹತ್ಯೆಯಾಗಿದ್ದರು. ಇವರ ಪೋಟೋ ಬ್ಯಾನರ್ ಭಾವಚಿತ್ರಗಳನ್ನು ಟ್ಯಾಕ್ಟರ್ ಮೂಲಕ ಮೆರವಣಿಗೆ ನಡೆಸಿದರು.

ಹಿಂದೂ ಕುಟುಂಬಗಳು ಗಟ್ಟಿಯಾಗಿವೆ: ಎಲ್ಲೆಲ್ಲಿ ಗಣೇಶೋತ್ಸವ ಆಚರಣೆಗಳು ಸಂಭ್ರಮದಿಂದ ನಡೆಯುತ್ತವೆ ಅಲ್ಲಿ ಹಿಂದೂ ಕುಟುಂಬಗಳು ಗಟ್ಟಿಯಾಗಿ ನಿಲ್ಲುತ್ತವೆ ಎಂದು ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹೇಳಿದರು.

ಹಿರಿಯೂರು ನಗರದ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಯ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಧರ್ಮದ ಬದ್ಧತೆಯ ರೂಪವೇ ಹಿರಿಯೂರು ನಗರವಾಗಿದೆ.ಗಣೇಶೋತ್ಸವ ಜಾಗೃತಿಯ ಆಧಾರದ ಮೇಲೆ ನಿಂತಿದೆ. ಹಿಂದೂ ಧರ್ಮದ ಮೇಲೆ ದಬ್ಬಾಳಿಕೆ ನಡೆದವು ಆಗ ಹಿಂದೂಗಳನ್ನು ಒಂದು ಗೂಡಿಸುವ ನಿಟ್ಟಿನಲ್ಲಿ ಗರ್ಭಗುಡಿಯೊಳಗಿದ್ದ ಗಣಪತಿ ದೇವಸ್ಥಾನ ಬಿಟ್ಟು ಬೀದಿಗೆ ಬಂದು ನಿಂತಿದ್ದ. ಹಿಂದೂಗಳ ಜಾಗೃತನಾಗಲಿ ಎಂದು ವರ್ಷಕ್ಕೊಮ್ಮೆ ತಪ್ಪದೇ ಬರುವವನು ಗಣಪತಿ ಎಂದು ಹೇಳಿದರು.

ಹಿಂದೂಗಳನ್ನು ಒಗ್ಗೂಡಿಸಲು ದೇವಸ್ಥಾನದಿಂದ ಗಣಪತಿ ನಡು ರಸ್ತೆಗೆ ಬಂದಿದ್ದಾನೆ.ಸುಮಾರು 200 ವರ್ಷಗಳ ಹಿಂದೆ ಬ್ರಿಟಿಷರು, ಡಚ್ಚರು, ಪೋರ್ಚುಗೀಸರು ನಮ್ಮ ಮೇಲೆ ಧಾಳಿ ಮಾಡುವಾಗ ಛತ್ರಪತಿ ಶಿವಾಜಿ ಆದರ್ಶಗಳನ್ನು ಗುರಿಯಾಗಿಟ್ಟುಕೊಂಡು ಬಾಲಗಂಗಾಧರ ತಿಲಕ್ ಅವರು ಗಣೇಶೋತ್ಸವಕ್ಕೆ ಪ್ರಾರಂಭ ಮಾಡುತ್ತಾರೆ. ಭಾರತದಲ್ಲಿ ಹಿಂದೂ ಜಾಗೃತಿಗಾಗಿ ಪ್ರತಿ ಊರಿಗೂ ಕರೆಕೊಟ್ಟ ವೀರ ಸಾವರ್ಕರ್ ಅವರು.

ಇತಿಹಾಸದಲ್ಲೂ ಶತ್ರುಗಳಿಂದ ವೀರ ಸಾವರ್ಕರ್ ಎಂದು ಕರೆಸಿಕೊಂಡ ಏಕೈಕ ನಮ್ಮ ಸ್ವಾತಂತ್ರ್ಯ ಹೋರಾಟಗಾರ ವೀರ ಸಾರ್ವಕರ್ ಬಗ್ಗೆ ಅವರು ತಿಳಿಯಬೇಕಿದೆ ಎಂದು ಹೇಳಿದರು. ಕೆಲವರಿಗೆ ಸಾವರ್ಕರ್ ಹೆಸರು ಕೇಳಿದರೆ ಉರಿಯುತ್ತದೆ. ಸಾವರ್ಕರ್ ಬಗ್ಗೆ ಸಾಲು ಸಾಲು ಆರೋಪ ಮಾಡುವವರಿಗೆ ಹೇಳಬೇಕಿದೆ. ಇಡೀ ಇತಿಹಾಸ ಎರಡು ಬಾರಿ ಇಡೀ ಜೀವನದುದ್ದಕ್ಕೂ ಕಾಲಾಪನಿ ಶಿಕ್ಷೆಗೆ ಗುರಿಯಾಗಿದ್ದ ಏಕೈಕ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಎಂದರು.

Leave a Reply

Your email address will not be published.

Send this to a friend