ಹಿರಿಯೂರು ( ಆಗಸ್ಟ್ ೧೪) : 75ನೇ ಭಾರತೀಯ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ ಹಿನ್ನೆಲೆಯಲ್ಲಿ ದೇಶದ ಪ್ರತಿ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಲು ಸರ್ಕಾರ ಕರೆ ನೀಡಿತ್ತು. ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ಕುರಿಗಾರರ ಕುರಿಹಟ್ಟಿಯಲ್ಲಿ ಹಾರಾಡಿದ ತ್ರಿವರ್ಣ ಧ್ವಜ ಹಿರಿಯೂರು ತಾಲ್ಲೂಕಿನ ಕಕ್ಕಯ್ಯನಹಟ್ಟಿಯಲ್ಲಿ ನೋಡುಗರ ಕಣ್ಮನ ಸೆಳೆದಿದೆ.
ಕುರಿಗಾಯಿಯ ಟೆಂಟ್ ನಲ್ಲೂ ತ್ರಿವರ್ಣ ಹಾರಾಟ : ಇತ್ತ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ತೊಟವಂದರಲ್ಲಿ ಕುರಿಗಾಹಿ ಕುರಿ ಮಂದೆ ಬಿಡುವ ಟೆಂಟ್ ನಲ್ಲಿ ತ್ರಿವರ್ಣ ಬಾವುಟ ಹಾರಿದ್ದು ಗಮನ ಸೆಳೆದಿದೆ. ಕಡೂರು ತಾಲೂಕಿನ ಪಂಚನಹಳ್ಳಿಯ ತೋಟವೊಂದರಲ್ಲಿ ಹಾಕಿದ್ದ ಟೆಂಟ್ ನಲ್ಲಿ ಕುರಿಗಾಯಿ ಧ್ವಜ ಹಾರಿಸಿ ಮಾದರಿಯಾಗಿದ್ದಾನೆ.
ಊರೂರು ಅಲೆಯುತ್ತಾ ಕುರಿಕಾಯುವ ಈತ ಚಿತ್ರದುರ್ಗ ಮೂಲದವನು. ಸದ್ಯ ಕಡೂರಿನ ಪಂಚನಹಳ್ಳಿಯಲ್ಲಿ ಟೆಂಟ್ ಹಾಕಿರುವ ಆತ ಅಲ್ಲೇ ಹರ್ ಘರ್ ತಿರಂಗ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿ ದೇಶಾಭಿಮಾನ ವ್ಯಕ್ತಪಡಿಸಿದ್ದಾನೆ.