ಹಿರಿಯೂರು ಜುಲೈ 15 : ಇಲ್ಲಿನ ನಗರಸಭೆಯ ಸಿಬ್ಬಂದಿಗಳು ಸೂರ್ಯನಿಗೆ ಸೆಡ್ಡು ಹೊಡೆದು, ಹಗಲಿನಲ್ಲಿ ಬೀದಿ ದೀಪ ಉರಿಸುತ್ತಿರುವ ಘಟನೆ ನಡೆದಿದೆ. ನಗರದ ದುರ್ಗಮ್ಮ ದೇವಸ್ಥಾನ ರಸ್ತೆಯ ಎರಡು ಕಂಬಗಳಲ್ಲಿ, ಸಾಗರ್ ರೆಡ್ಡಿ ಹೋಟೆಲ್ ಮುಂಭಾಗದ ಕಂಬ ಹಾಗೂ ಸೇತುವೆ ಬಳಿ ಇರುವ ಕಂಬದಲ್ಲಿ ವಿದ್ಯುತ್ ದೀಪ ಉರಿಯುತ್ತಿದ್ದರು ನಗರಸಭೆಯ ಸಿಬ್ಬಂದಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂಬ ಸಾರ್ವಜನಿಕರಿಂದ ಆರೋಪ ಕೇಳಿ ಬಂದಿದೆ.