ವಿದ್ಯಾರ್ಥಿಗಳಿಗೆ ಉಚಿತ ಲಸಿಕೆ ಅಭಿಯಾನ ಹಾಗು ಟ್ಯಾಬ್ ವಿತರಣೆ

ಹಿರಿಯೂರು ಜೂನ್, 26 :ರಾಜ್ಯದಲ್ಲಿ ಕೊರೊನಾ ಸಂಕಷ್ಟ ಪರಿಸ್ಥಿತಿಯಿಂದಾಗಿ ಶೈಕ್ಷಣೆಕ ಪ್ರಕ್ರಿಯೆಗಳು ಕುಂಠಿತವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಟ್ಯಾಬ್ ಗಳನ್ನು ಹಾಗೂ 18 ವರ್ಷ ಮೇಲ್ಪಟ್ಟ ಸಾರ್ವಜನಿಕರು ಹಾಗು ವಿದ್ಯಾರ್ಥಿಗಳಿಗೆ ಉಚಿತ ಲಸಿಕೆ ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಕ್ಷೇತ್ರದ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲಸಿಕೆ ಅಭಿಯಾನ ಹಾಗೂ ಪ್ರಥಮ ವರ್ಷದ ಪದವಿ ಮತ್ತು ಪ್ರಥಮ, ದ್ವಿತೀಯ ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶಕ್ಕೆ ಕೊರೊನಾ ಭಾದಿಸುವುದಿಲ್ಲ ಎಂದು ತಿಳಿದಿದ್ದೆವು ಆದರೆ ಕೊರೊನಾ ಅಪ್ಪಳಿಸಿದಾಗ ಸರ್ಕಾರಗಳು ತೆಗೆದು ಕೊಂಡಂತಹ ನಿರ್ದಾರ ಹಾಗು ವೈದ್ಯರು, ನರ್ಸ್ ಗಳು, ಆಶಾಕರ್ತೆಯರು ಎಲ್ಲರ ಅಪಾರ ಪರಿಶ್ರಮದಿಂದಾಗಿ ಪರಿಸ್ಥಿತಿ ವಿಪರೀತಕ್ಕೆ ಹೋಗದ ಹಾಗೆ ತಡೆಯಲು ಸಹಕಾರಿಯಾಗಿತು ಎಂದರಲ್ಲದೆ.
ಮೊದಲನೆ ಅಲೆಯಲ್ಲಿ ಹಚ್ಚು ಸಾವು ನೋವುಗಳು ಸಂಭವಿಸಲಿಲ್ಲ, ಎರಡನೇ ಅಲೆ ಬರುವ ಬಗ್ಗೆ ವೈದ್ಯರು, ವಿಜ್ಞಾನಿಗಳು ಮುನ್ಸೂಚನೆ ನಿಡಿದ್ದರೂ, ಜನರ ನಿರ್ಲಕ್ಷದಿಂದಾಗಿ ಸಭೆಸಮಾರಂಭ, ಹಬ್ಬಹರಿದಿನ, ಮದುವೆ, ಜಾತ್ರೆ ಗಳಲ್ಲಿ ಮಾಸ್ಕ, ಸಾಮಾಜಿಕ ಅಂತರ ವಿಲ್ಲದೇ ಜನ ಸೇರಿದ್ದರಿಂದ ಎರಡನೇ ಅಲೆಯಲ್ಲಿ ಹೆಚ್ಚು ಸಾವು ನೋವುಗಳು ಸಂಭವಿಸಲಾಯಿತು.
ಆ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಕೊವಿಡ್ ಕೇರ್ ಸೆಂಟರ್ ಗಳನ್ನು ತೆರೆದು ಕೊರೊನಾ ರೋಗದ ಲಕ್ಷಣ ಇದ್ದವರಿಗೆ ಕೇರ್ ಸೆಂಟರ್ ಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಯಿತು, ಅಲ್ಲದೆ ನಮ್ಮ ಕ್ಷೇತ್ರದಲ್ಲಿ ಯಾವುದೇ ಆಕ್ಸಿಜನ್ ಕೊರತೆ ಆಗದಂತೆ ಶಿವಮೊಗ್ಗ, ಭದ್ರವತಿಗಳಿಂದ ಆಕ್ಸಿಜನ್ ತರಸಿ ಆಕ್ಸಿಜನ್ ಕಾಸ್ಟಟರ್ಸ್ ಗಳನ್ನು ಅಗತ್ಯ ಇರುವ ಆಸ್ಪತ್ರೆಗಳಿಗೆ ನೀಡಲಾಯಿತು ಎಂದರು.
ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಸರ್ವೆಮಾಡಿಸಿ ಕೊರೊನಾ ರೋಗಿಗಳು, ರೋಗದ ಲಕ್ಷಣ ಹೊಂದಿದವರಿಗೆ ಅವರ ಮನೆಗಳಿಗೆ ಔಷಧಿಗಳನ್ನು ಸಪ್ಲೇ ಮಾಡಿದ್ದೇವೆ ಅಲ್ಲದೆ ಈಗ ಮೂರನೇ ಅಲೆಗೆ ಬೇಕಾಗಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಪಪ್ರಚಾರದಿಂದಾಗಿ ಜನರು ಲಸಿಕೆ ತೆಗೆದುಕೊಳ್ಳಲಿಲ್ಲ ಆದರೆ ಈ ಬಗ್ಗೆ ಜಾಗೃತಿ ಮೂಡಿಸಿದ್ದರಿಂದ ಈಗ ಹೆಚ್ಚು ಜನ ಲಸಿಕೆ ಪಡೆಯುತ್ತಿದ್ದಾರೆ ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಮುಖಂಡ ಡಿ.ಟಿ.ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳು ತಂದೆ, ತಾಯಿ, ಪೋಷಕರ ಪರಿಶ್ರಮ ಅರಿತು ಉತ್ತಮ ಭವಿಷ್ಯ ರೂಪಿಸಿಕೊಂಡು, ವಿದ್ಯಾರ್ಥಿ ದೆಸೆಯಿಂದಲೇ ಸ್ಪಷ್ಟವಾದ ಗುರಿ ಹಾಗು ಮಹನೀಯರ ಆದರ್ಶ ಇಟ್ಟು ಕೊಂಡು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುವ ಮೂಲಕ ದೇಶದ ಸತ್ಪ್ರಜೆಗಳಾಗಿ ಬಾಳಿ ಎಂಬುದಾಗಿ ಹಾರೈಸಿದರು.
ಕೊರೊನಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದ ಸಮಾಜ ಹಾಗೂ ಸಮುದಾಯಕ್ಕೆ ಅರಿವು ಮೂಡಿಸಿ ಈಗ ಲಸಿಕೆ ನೀಡಲಾಗುತ್ತಿದೆ. ವರ್ತಕರು, ದಾನಿಗಳು, ಸಂಘ ಸಂಸ್ಥೆಗಳ ನೆರವು ಪಡೆದು ಕೊರೋನ ಸೋಂಕಿತರಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ಸ್ ನೀಡಲಾಯಿತು. ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗು ಸಿಬ್ಬಂದಿಗಳ ಸಹಕಾರದಿಂದ ತಾಲ್ಲೂಕಿನಲ್ಲಿ ಕೊರೊನಾವನ್ನು ಯಶಸ್ವಿಯಾಗಿ ನಿಯಂತ್ರಿಸಲಾಯಿತು ಎಂದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ತಹಶೀಲ್ದಾರ್ ಶಿವಕುಮಾರ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವೆಂಕಟೇಶ್, ನಗರಸಭೆ ಪೌರಾಯುಕ್ತರಾದ ಡಿ.ಉಮೇಶ್, ಜಿ.ಪಂ.ಸದಸ್ಯೆ ರಾಜೇಶ್ವರಿ, ವಾಣಿ ಕಾಲೇಜಿನ ಪ್ರಾಂಶುಪಾಲ ಡಿ.ಧರಣೇಂದ್ರಯ್ಯ, ವೇದಾಕಾಲೇಜಿನ ಪ್ರಾಂಶುಪಾಲಚಂದ್ರಶೇಖರ್, ಜೂನಿಯರ್ ಕಾಲೇಜಿನ ಪ್ರಾಂಶುಪಾಲ ನಾಗರಾಜ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್ ಯಾದವ್, ನಗರಸಭೆ ಸದಸ್ಯರುಗಳಾದ ಸಣ್ಣಪ್ಪ, ಮಹೇಶ್ ಪಲ್ಲವ, ಕೇಶವಮೂರ್ತಿ, ಬಿ.ಎನ್.ತಿಪ್ಪೇಸ್ವಾಮಿ, ಸಿ.ಎಂ.ಸ್ವಾಮಿ, ಬಾಲಕೃಷ್ಣ, ಬಿಜೆಪಿ ಮುಖಂಡರುಗಳಾದ ದ್ಯಾಮೇಗೌಡ್ರು, ಯಶವಂತರಾಜ್, ಟಿ.ಚಂದ್ರಶೇಖರ್, ಕಬಡ್ಡಿ ಶ್ರೀನಿವಾಸ್, ಎಂ.ಎಸ್.ರಾಘವೇಂದ್ರ, ಚಿರಂಜೀವಿ, ಸಿಪಿಐ ಶಿವಕುಮಾರ್, ಪಿ.ಎಸ್.ಐ. ಅನುಸೂಯ, ಪರಮೇಶ್, ಶಶಿಕಲಾ, ಇತರರು ಉಪಸ್ಥಿತರಿದ್ದರು.

Leave a Reply

Your email address will not be published.

Send this to a friend