ನಗರಸಭೆಯ ಉಪಾಧ್ಯಕ್ಷರಾಗಿ
ಕಾಂಗ್ರೆಸ್ ನ ಗುಂಡೇಶ್ ಕುಮಾರ್ ರವರು ಆಯ್ಕೆ
ಹಿರಿಯೂರು ( ಆಗಸ್ಟ್ 11) :ನಗರಸಭೆಯ ನೂತನ ಉಪಾಧ್ಯಕ್ಷರಾಗಿ ನಗರಸಭೆಯ ಸದಸ್ಯರಾದ ಶ್ರೀಯುತ ಗುಂಡೇಶ್ ಕುಮಾರ್ ರವರು ಆಯ್ಕೆಯಾಗಿದ್ದಾರೆ.
ನೂತನ ನಗರಸಭೆ ಉಪಾಧ್ಯಕ್ಷರಾದ ಗುಂಡೇಶ್ ಕುಮಾರ್ ರವರನ್ನು ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನಗರದ ಮುಖ್ಯಬೀದಿಗಳಲ್ಲಿ ಮೆರವಣಿಗೆ ಮಾಡಿದರಲ್ಲದೆ ಪಟಾಕಿ ಸಿಡಿಸಿ, ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಿವರಂಜಿನಿಯಾದವ್, ನಗರಸಭೆ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.