ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ತುಂಬಾ ಮಹತ್ವ : ಡಾ. ಪಾತಲಿಂಗಪ್ಪ ಅಭಿಮತ

ಹಿರಿಯೂರು : ರಾಷ್ಟ್ರವನ್ನು ಸದೃಢವಾಗಿ ಕಟ್ಟುವ ನಿಟ್ಟಿನಲ್ಲಿ ಯುವಕರ ಪಾತ್ರ ಬಹಳ ದೊಡ್ಡದು ಎಂದು ಡಾ. ಪಾತಲಿಂಗಪ್ಪ ಈರಗಾರ ಹೇಳಿದರು. ನಗರದ ಡಿ. ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ನೆಹರು ಯುವ ಕೇಂದ್ರ ಮತ್ತು ಬುಡಕಟ್ಟು ಸಾಂಸ್ಕೃತಿಕ ಕಲಾ ಯುವಕರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಂವಿಧಾನದ ಆಶಯಗಳಾದ ಸಮಾನತೆ,ಜ್ಯಾತ್ಯಾತೀತ, ಬಂದುತ್ವ ರಾಷ್ಟ್ರೀಯ, ಏಕತೆಗೆ ಪೂರಕವಾದ ಮೌಲ್ಯಗಳನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಂಡು ಸನ್ಮಾರ್ಗದಲ್ಲಿ ನೆಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಸಂತೋಷ್ ಕುಮಾರ್ ಜಿ.ಡಿ ಮಾತನಾಡಿ ನೇತಾಜಿ ಹಾಗೂ ಸುಭಾಷ್ ಚಂದ್ರ ಬೋಸ್ ಅವರ ಆದರ್ಶ ಮತ್ತು ತತ್ವಗಳು ಪ್ರಸ್ತುತ ಯುವಕರಿಗೆ ತುಂಬಾ ಮಹತ್ವದ್ದು ಎಂದು ತಿಳಿಸಿದರು. ಎಸ್ ಹೆಚ್ ಶಫಿವುಲ್ಲಾ ಮಾತನಾಡಿ ಸ್ವಾತಂತ್ರ್ಯ ಪೂರ್ವದ ಭಾರತದ ದಾಸ್ಯದ ದಿನಗಳು ಅಂದು ಭಾರತೀಯರು ಅನುಭವಿಸಿದ ಕಠಿಣ ದಿನಗಳಾಗಿದ್ದವು. ಇದರ ವಿರುದ್ಧ ನಿರ್ಮೂಲನೆಗೆ ಶ್ರಮಿಸಿದ ಚಳುವಳಿಗಳು, ದಾರ್ಶನಿಕರ ಹೋರಾಟದ ನೆನಪುಗಳನ್ನು ನಾವು ಮರೆಯುವಂತಿಲ್ಲ ಎಂದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಚಿತ್ರಲಿಂಗಪ್ಪ, ಮಂಜುನಾಥ್ ಮ್ಯಾಕ್ಲೂರಹಳ್ಳಿ, ಶಿಕ್ಷಕ ಜಿ.ಡಿ. ಚಿದಾನಂದ, ಗೀತಾ, ನಿಲಯದ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.

Send this to a friend