ಚಿತ್ರದುರ್ಗ : ಭಕ್ತನೊಬ್ಬನು “ಬಾಳೆ ಹಣ್ಣು ಹಾಗೂ ಹತ್ತು ರೂಪಾಯಿ ನೋಟಿನ” ಮೇಲೆ “ಜೈ ಆರ್.ಸಿ.ಬಿ.” ಎಂದು ಬರೆದು ದೇವರಿಗೆ ಅರ್ಪಿಸಿರುವ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಶುಕ್ರವಾರ ಬಹಳ ಅದ್ದೂರಿಯಾಗಿ ಜರುಗಿತು. ಭಕ್ತರು ಬಾಳೆ ಹಣ್ಣುಗಳನ್ನು ರಥದ ತೇರಿಗೆ ಎಸೆಯುವ ಮೂಲಕ ತನ್ನ ಹರಕೆ ತಿರಿಸಿದರು. ಆದರೆ ಇಲ್ಲೊಬ್ಬ ಭಕ್ತ ಈ ಬಾರಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಐ.ಪಿ.ಎಲ್. ಟ್ವಿ 20 ಮ್ಯಾಚ್ ನಲ್ಲಿ ಕಪ್ ಗೆಲ್ಲಲು ಆರ್.ಸಿ.ಬಿ. ಅಭಿಮಾನಿ ವಿಶಿಷ್ಟವಾಗಿ ಹರಕೆ ಹೊತ್ತಿದ್ದನೆ. “ಬಾಳೆ ಹಣ್ಣು ಹಾಗೂ ಹತ್ತು ರೂಪಾಯಿ ನೋಟಿನ” ಮೇಲೆ “ಜೈ ಆರ್.ಸಿ.ಬಿ.” ಎಂದು ಬರೆದು ದೇವರಿಗೆ ಅರ್ಪಿಸಿರುವ ಘಟನೆ ನಡೆದಿದೆ. ಶ್ರೀ ತೇರುಮಲ್ಲೇಶ್ವರ ರಥೋತ್ಸವದ ವೇಳೆ ಆಟ್ಟಿಕಾ ಗೋಲ್ಡ್ ಪ್ಯಾಲೇಸ್ ಬೊಮ್ಮನಹಳ್ಳಿ ಬಾಬು ಅವರು ಹರಕೆ ತಿರಿಸಲು ಹೆಲಿಕ್ಯಾಪ್ಟರ್ ಮೂಲಕ ಹೂ ಸುರಿಮಳೆ ಸುರಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಸರ್ಕಾರ ಅನುಮತಿ ನೀಡಿರಲಿಲ್ಲ. ಹೆಲಿಕಾಪ್ಟರ್ ಮೂಲಕ ಬಂದ ಬೊಮ್ಮನಹಳ್ಳಿ ಬಾಬು ಎರಡು ಬಾರಿ ಹಿರಿಯೂರು ನಗರವನ್ನು ಸುತ್ತುವರಿದು ನಂತರ ಹೊರವಲಯದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗಿತ್ತು. ಸ್ವಾಮಿಯ ಮುಕ್ತಿ ಬಾವುಟವನ್ನು ಹರಾಜಿನಲ್ಲಿ 5 ಲಕ್ಷಕ್ಕೆ ಬೊಮ್ಮನಹಳ್ಳಿ ಬಾಬು ಪಡೆದುಕೊಂಡರು. ರಾಜ್ಯದ ವಿವಿಧ ಕಡೆ ನಡೆಯುವ ರಥೋತ್ಸವದ ಜಾತ್ರೆಗಳಲ್ಲಿ ಭಕ್ತರು ವಿಶಿಷ್ಟವಾಗಿ ಹರಕೆ ತಿರಿಸುತ್ತಿರುವುದು ಆಗಾಗ ಕಾಣಬಹುದಾಗಿದೆ. ಜಾತ್ರೆಯ ರಥೋತ್ಸವದಲ್ಲಿ ಬಾಳೆ ಹಣ್ಣು ಹಾಗೂ ಹತ್ತು ರೂಪಾಯಿ ನೋಟಿನ ಮೇಲೆ ಜೈ ಆರ್.ಸಿ.ಬಿ. ಎಂದು ಬರೆದು ದೇವರಿಗೆ ಅರ್ಪಿಸಿರುವುದು ಜಾತ್ರೆಯ ವಿಶೇಷವಾಗಿತ್ತು ಎನ್ನಬಹುದು.