ಹಿರಿಯೂರು : ಮುಂಬರುವ ಏಪ್ರಿಲ್ ತಿಂಗಳಲ್ಲಿ ತಾಲುಕು ಉಪ್ಪಾರ ಸಮುದಾಯ ವತಿಯಿಂದ ಸುಮಾರು 25 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಶ್ರೀ ಪರಮ ಪೂಜ್ಯ ಪುರುಷೋತ್ತಮಾನಂದ ಪುರಿ ಸ್ವಾಮೀಜಿಯ ನೇತೃತ್ವದಲ್ಲಿ ಕಾರ್ಯಕ್ರಮ ಮಾಡಲಾಗುವುದು ಎಂದು ತಾಲೂಕು ಉಪ್ಪಾರ ಸಮಾಜದ ಅಧ್ಯಕ್ಷ ರಾಮಣ್ಣ ತಿಳಿಸಿದರು. ವೇದಾವತಿ ನಗರದಲ್ಲಿರುವ ಶ್ರೀ ಭಗೀರಥ ನೌಕರರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು
ಸಾಮೂಹಿಕ ವಿವಾಹ ಕಾರ್ಯಕ್ರಮ ಎಲ್ಲ ಸಮುದಾಯಗಳಿಗೂ ಉಚಿತ ಸಾಮೂಹಿಕ ವಿವಾಹ ಮಾಡಲಾಗುತ್ತದೆ ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯಗಳಿಸಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಗುವುದು ಎಂದು ತಿಳಿಸಿದರು.
ಸಂಘದ ಕಾರ್ಯದರ್ಶಿ ಹಳದಪ್ಪ ಮಾತನಾಡಿ ಉಪ್ಪಾರ ಸಮುದಾಯ ಹಿಂದುಳಿದಿದ್ದು ಈ ಸಮಾಜವನ್ನು ಪ. ಪಂಗಡಕ್ಕೆ ಸೇರಿಸಬೇಕು ಎಂದರು. ಈಗಾಗಲೇ ಕುಲಶಾಸ್ತ್ರೀಯ ಅಧ್ಯಯನ ನಡೆಯುತಿದ್ದು, ಪ್ರತಿಯೊಬ್ಬರೂ ಸಹಕರಿಸಬೇಕು. ಕುಲ ಶಾಸ್ತ್ರೀಯ ತಂಡ ಅಧ್ಯಯನಕ್ಕೆ ಹಿರಿಯೂರಿಗೆ ಬಂದಾಗ ಎಲ್ಲರೂ ಸಹಕರಿಸಬೇಕು ಎಂದರು. ಮುಂದಿನ ದಿನಗಳಲ್ಲಿ ನಮ್ಮ ಪ್ರಮುಖ ಬೇಡಿಕೆಯಾದ ಮೀಸಲಾತಿಗಾಗಿ ಆಗ್ರಹಿಸಿ ಅತಿ ಶೀಘ್ರದಲ್ಲೇ ಸಮಾಜದ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಸಭೆಯಲ್ಲಿ ರಾಜಣ್ಣ, ನಿಂಗಪ್ಪ ಉಪ್ಪಾರ್, ಎಚ್. ಹನುಮಂತಪ್ಪ, ಭಾಗ್ಯ, ಮಸ್ಕಲ್ ವಿ.ಎಲ್.ಗೌಡ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.