ವಾಣಿ ವಿಲಾಸ ಡ್ಯಾಂ ಕೋಡಿ ಬೀಳಲು 3 ಅಡಿ ಬಾಕಿ..!

ಹಿರಿಯೂರು (ಆಗಸ್ಟ್ 13) : ಮದ್ಯ ಕರ್ನಾಟಕದ ಜಲಪಾತ್ರೆ ಎಂದು ಕರೆಸಿಕೊಳ್ಳುವ ಚಿತ್ರದುರ್ಗ ಜಿಲ್ಲೆಯ ಏಕೈಕ ಜೀವನಾಡಿಯಾಗಿರುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಒಳಹರಿವು ಮುಂದುವರಿದಿದೆ. ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಡ್ಯಾಂ ಗೆ ನೀರು ಹರಿದು ಬರುತ್ತಿದೆ.

ಇಂದಿನ ವರದಿಯಲ್ಲಿ 2557 ಕ್ಯೂಸೆಕ್ ಒಳಹರಿವು ನೀರು ಸಂಗ್ರಹವಾಗಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 127 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ 125.50 ಅಡಿ ಸಂಗ್ರಹವಾಗಿ, ದಾಖಲು ನಿರ್ಮಾಣವಾಗಿತ್ತು. ಇದೀಗ ಈ ದಾಖಲೆಯನ್ನು ಸರಿಗಟ್ಟಿದೆ. 30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ವಿವಿ ಸಾಗರ ಡ್ಯಾಂ, 130 ಅಡಿಗಳಷ್ಟು ನೀರು ಸಂಗ್ರಹ ಹೊಂದಿದೆ. 1933 ರಲ್ಲಿ 130.25 ಅಡಿ ನೀರು ಸಂಗ್ರಹವಾಗಿತ್ತು.
ಈ ಬಾರಿ ಹೆಚ್ಚು ಮಳೆ ಬಂದು ಸುಮಾರು 3 ಅಡಿ ನೀರು ವಿವಿ ಸಾಗರಕ್ಕೆ ಹರಿದು ಬಂದರೆ ಕೊಡಿ ಬಿದ್ದು ಇತಿಹಾಸ ನಿರ್ಮಿಸಲಿದೆ

Leave a Reply

Your email address will not be published.

Send this to a friend