ಹಿರಿಯೂರು ಜೂನ್ (18): ತಾಲೂಕಿನ ಧರ್ಮಪುರ ಹೋಬಳಿಯ ಹೆಳವರಹಟ್ಟಿ ಕುಗ್ರಾಮದಲ್ಲಿ ಸಮಾಜ ಸೇವಕ ವೇಣುಕಲ್ ಗುಡ್ಡದ ಕೆ. ಅಭಿನಂದನ್ ಅವರು ಆಹಾರ ಕಿಟ್ ವಿತರಣೆ ಮಾಡಿದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಕಡುಬಡವರಿಗೆ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಕುಟುಂಬಕ್ಕೆ ಆಸೆಯಾಗಿದ್ದಾರೆ. ಕೆ. ಅಭಿನಂದನ್ ಅವರ ಸಾಮಾಜ ಸೇವೆಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಕೇಶ್ ಗೌಡ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.