ಚಿತ್ರದುರ್ಗ : ಇಬ್ಬರು ಬಾಲಕರು ನಿನ್ನೆ ಸಂಜೆ ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದರು. ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿರುವ ಘಟನೆ ಹೊಸದುರ್ಗ ತಾಲ್ಲೂಕಿನಲ್ಲಿ ನಡೆದಿದೆ. ದೇವಪುರ ಕಾಲೋನಿಯ ಶಂಕರಪ್ಪನ ಮಗ ಜಯಂತ್ (11), ಈಶ್ವರಪ್ಪ ಮಗ ಪ್ರಜ್ವಲ್ (10) ಮೃತ ಬಾಲಕರಾಗಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಚಿತ್ರದುರ್ಗ ಜಿಲ್ಲೆಯಾದ್ಯಂತ ಮಳೆರಾಯ ಹಬ್ಬರಿಸಿದ್ದರಿಂದ ಹಳ್ಳ ಕೊಳ್ಳ ಮೈದುಂಬಿ ಹರಿಯುತ್ತಿವೆ. ಹೊಸದುರ್ಗ ತಾಲ್ಲೂಕಿನ ಹೀರೆಹಳ್ಳ ತುಂಬಿ ಹರಿಯುತ್ತಿತ್ತು. ಇವರಿಬ್ಬರು ಬಾಲಕರು ಹೀರೆಹಳ್ಳದಲ್ಲಿ ಮೀನು ಹಿಡಿಯಲು ತೆರೆಳಿದ್ದಾರೆ. ನೀರಿನ ರಭಸಕ್ಕೆ ಇಬ್ಬರು ಕೊಚ್ಚಿ ಹೋಗಿದ್ದಾರೆ. ಬಾಲಕರು ಕಣ್ಮರೆಯಾದ ನಂತರ ಹುಡುಕಾಟ ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರಿ ಇಡೀ ಬಾಲಕರ ಪತ್ತೆ ಕಾರ್ಯ ಮುಂದುವರಿದಿದೆ. ಇಂದು ಬೆಳಗ್ಗೆ ಹೊಸದುರ್ಗ ತಾಲ್ಲೂಕಿನ ನರಸೀಪುರ ಗ್ರಾಮದ ಹೀರೆಹಳ್ಳದಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ವಿಷಯ ತಿಳಿದ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಮುಗಿಯವರಿಗೂ ಸ್ಥಳದಲ್ಲೇ ಇದ್ದರು. ಹೊಸದುರ್ಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.