ಹಿರಿಯೂರು : ತಾಲ್ಲೂಕಿನ ಹೊಸಯಳನಾಡು ಕರ್ನಾಟಕ ಪಬ್ಲಿಕ್ ಶಾಲೆಗೆ ವಿಜ್ಞಾನ ವಿಭಾಗವನ್ನು (ಪಿಸಿಎಂಬಿ) ಶಿಕ್ಷಣ ಇಲಾಖೆ ಮಂಜೂರು ಮಾಡಿದೆ. ಪ್ರಸಕ್ತ ಸಾಲಿನ ಪಿಯುಸಿ ವಿಜ್ಞಾನ ವಿಭಾಗಕ್ಕೆ ಸುತ್ತುಮುತ್ತಲಿನ ಹಳ್ಳಿಗಳಾದ ಮಸ್ಕಲ್, ಮಲ್ಲೇಣು, ಮಟ್ಟಿ, ಪುಟ್ಟಯ್ಯನಕಟ್ಟೆ, ಕಸವನಹಳ್ಳಿ, ಆಲೂರು, ಹಳೆಯಳನಾಡು, ಉಪ್ಪಳಗೆರೆ, ರಂಗನಾಥಪುರ, ಇತ್ಯಾದಿ ಸುತ್ತಮುತ್ತ ಹಳ್ಳಿಗಳ ನೂರಾರು ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ. ಗ್ರಾಮಿಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ 2020-2021 ರಿಂದ ನೂತನವಾಗಿ ವಿಜ್ಞಾನ ವಿಭಾಗ ಮಂಜೂರು ಮಾಡಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದು ವಿದ್ಯಾಭ್ಯಾಸದ ಪಡೆಯುವ ಮೂಲಕ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಈಗಾಗಲೇ ಬೇರೆ ಬೇರೆ ದೂರದ ಕಾಲೇಜಿನಲ್ಲಿ ದಾಖಲಾದವರು ಸಹ ಮೂಲ ದಾಖಲಾತಿಗಳೊಂದಿಗೆ ಕಾಲೇಜಿಗೆ ಪ್ರವೇಶ ಪಡೆಯಬಹುದಾಗಿದೆ ಎಂದು ಪ್ರಾಂಶುಪಾಲ ಚಂದ್ರಯ್ಯ ಹಾಗೂ ಶಾಲೆಯ ಮಹಾಪೋಷಕ ನಾ. ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ.