ಐಪಿಎಲ್ ವೇಳಾಪಟ್ಟಿ ಪ್ರಕಟ; ಚನ್ನೈ – ಮುಂಬೈ ಮೊದಲ ಪಂದ್ಯ.

ಬೆಂಗಳೂರು : ಬಹುನಿರೀಕ್ಷಿತ ಐಪಿಎಲ್ 13ನೇ ಆವೃತ್ತಿಯ ವೇಳಾಪಟ್ಟಿ ಕೊನೆಗೂ ಭಾನುವಾರ ಬಿಡುಗಡೆಯಾಗಿದೆ. ಇದೆ ತಿಂಗಳ ಸೆಪ್ಟೆಂಬರ್ 19ರಂದು ಅಬುಧಾಬಿಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳು ಎದುರಾಗಲಿವೆ.

ಇತ್ತ ಟೂರ್ನಿಗೆ ಇನ್ನು ಕೇವಲ 12 ದಿನಗಳು ಮಾತ್ರ ಬಾಕಿ ಉಳಿದಿದೆ. ಮೊದಲ ಲೀಗ್​ ಹಂತದ ಎಲ್ಲ 56 ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಲಾಗಿದೆ.

ವಿರಾಟ್​ ಕೊಹ್ಲಿ ಸಾರಥ್ಯದ ಆರ್​​ಸಿಬಿ ತಂಡ ಸೆಪ್ಟೆಂಬರ್​ 21ರಂದು ಸನ್​ರೈಸರ್ಸ್ ತಂಡದ ವಿರುದ್ಧ ದುಬೈನಲ್ಲಿ ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ.

ಫೈನಲ್ ಪಂದ್ಯ ನವೆಂಬರ್ 10 ರಂದು ನಡೆಯಲಿದೆ. ಸೆಪ್ಟೆಂಬರ್​ 20ರಂದು ಟೂರ್ನಿಯ 2ನೇ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ಮತ್ತುತಂಡಗಳು ಮುಖಮುಖಿಯಾಗಲಿವೆ.

ಒಟ್ಟು 53 ದಿನಗಳ ಟೂರ್ನಿಯಲ್ಲಿ 60 ಪಂದ್ಯಗಳು ಶಾರ್ಜಾ, ಅಬುಧಾಬಿ ಮತ್ತು ದುಬೈನಲ್ಲಿ ನಡೆಯಲಿವೆ. ಎಂದಿನಂತೆ ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಅಗ್ರ 4 ತಂಡಗಳು ಪ್ಲೇಆಫ್​ ಹಂತಕ್ಕೇರಲಿವೆ. ಈ ಬಾರಿ ಐಪಿಎಲ್ ಪ್ರಶಸ್ತಿಗಾಗಿ ಎಲ್ಲ ತಂಡಗಳು ಪೈಪೋಟಿ ನಡೆಸಲಿವೆ.

Leave a Reply

Your email address will not be published.

Send this to a friend