ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಆರ್.ಸಿಬಿ ಹೀನಾಯ ಸೋಲು.

ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಟೂರ್ನಿಯ 6ನೇ ಪಂದ್ಯದಲ್ಲಿ ಬ್ಯಾಟಿಂಗ್​ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚು ಹರಿಸಿದ ಪಂಜಾಬ್​ ತಂಡ ರಾಯಲ್​​​ ಚಾಲೆಂಜರ್ಸ್​ ಬೆಂಗಳೂರು ಎದುರು 97 ರನ್​ಗಳ ಭರ್ಜರಿ ಜಯ ಸಾಧಿಸಿತು.ಇತ್ತ ಬೆಂಗಳೂರು ಹೀನಾಯ ಸೋಲು ಅನುಭವಿಸಿತು.

ಪಂಜಾಬ್​ ನೀಡಿದ್ದ 207 ರನ್​ಗಳ ಗುರಿ ಬೆನ್ನತ್ತಿದ ಆರ್​ಸಿಬಿ ಕೇವಲ 10 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಸರ್ವಪತಗೊಂಡು ಕೇವಲ 109 ರನ್​ ಕಲೆಹಾಕುವ ಮೂಲಕ ಪಂದ್ಯವನ್ನು ಕೈಚೆಲ್ಲಿತ್ತು.

ಆರಂಭದಲ್ಲೇ ಕೇವಲ 4 ರನ್​ಗೆ ದೇವದತ್​ ಪಡಿಕ್ಕಲ್​ (1), ಜಾಸ್​ ಫಿಲಿಪ್​ (0) ಮತ್ತು ನಾಯಕ ವಿರಾಟ್​ ಕೊಹ್ಲಿ (1) ವಿಕೆಟ್​ ಕಳೆದುಕೊಂಡು ಆರ್​ಸಿಬಿ ತಂಡ ಒತ್ತಡಕ್ಕೆ ಸಿಲುಕಿತು. ನಂತರ ಆ್ಯರನ್​ ಫಿಂಚ್​ (20) ಜತೆಗೂಡಿದ ಎಬಿ ಡಿವಿಲಿಯರ್ಸ್ (28)​ ಕೆಲವೊತ್ತು ಕ್ರಿಸ್​ನಲ್ಲಿ ನಿಂತು ಒಂದಿಷ್ಟು ಚೇತರಿಕೆ ನೀಡಿದಾದರೂ ಸಾಲು ಸಾಲು ವಿಕೆಟ್​ ಒಪ್ಪಿಸಿದರು. ಕೇವಲ 57 ರನ್​ಗೆ ಪ್ರಮುಖ 5 ವಿಕೆಟ್​ ಕಳೆದುಕೊಂಡ ಆರ್​ಸಿಬಿಗೆ ಬಹುತೇಕ ಸೋಲು ಖಚಿತವಾಯಿತು.

ಶಿವಂ ದುಬೆ (12), ಉಮೇಶ್​ ಯಾದವ್​ (0) ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದರು. ಇತ್ತ ವಾಷಿಂಗ್ಟನ್​ ಸುಂದರ್​ 30 ರನ್​ ಕಲೆಹಾಕುವ ಮೂಲಕ ತಂಡದ ವೈಯಕ್ತಿಕ ಗರಿಷ್ಠ ರನ್​ ದಾಖಲಿಸಿದರು. ಉಳಿದಂತೆ ನವದೀಪ್​ ಸೈನಿ (6) ಹಾಗೂ ಯಜುವೇಂದ್ರ ಚಹಾಲ್​ (1) ರನ್​ ಗಳಿಸಿ ಔಟಾದರೆ, ಡೇಲ್​ ಸ್ಟೇನ್​ (1) ಅಜೇಯರಾಗಿ ಉಳಿದರು.

ಪಂಜಾಬ್​ ಪರ ಮಾರಕ ಬೌಲಿಂಗ್​ ದಾಳಿ ಮಾಡಿದ ರವಿ ಬಿಷ್ಣೋಯ್​ ಹಾಗೂ ಮುರುಗನ್​ ಅಶ್ವಿನ್​ ತಲಾ 3 ವಿಕೆಟ್​ ಕಬಳಿಸಿ ಮಿಂಚಿದರು. ಉಳಿದಂತೆ ಶೆಲ್ಡನ್​ ಕಾಟ್ರೆಲ್​ 2 ವಿಕೆಟ್​ ಪಡೆದರೆ, ಮಹಮ್ಮದ್​ ಶಮಿ ಮತ್ತು ಗ್ಲೇನ್​ ಮ್ಯಾಕ್ಸ್​ವೆಲ್​ ತಲಾ 1 ವಿಕೆಟ್​ಗೆ ತೃಪ್ತಿಪಟ್ಟರು.

Leave a Reply

Your email address will not be published.

Send this to a friend