ಚಿತ್ರದುರ್ಗ : ಮದ್ಯಕರ್ನಾಟಕದಲ್ಲಿ ಅತ್ಯಂತ ಹೆಚ್ಚಾಗಿ ಕಂಡುಬರುವ ಬುಡಕಟ್ಟು ಕಾಡುಗೊಲ್ಲ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಚಿತ್ರದುರ್ಗ ಮಾಜಿ ಸಂಸದ ಪಿ.ಕೊದಂಡರಾಮಯ್ಯ ಹೇಳಿದರು.ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಾಡುಗೊಲ್ಲ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆನ್ ಲೈನ್ ಮೂಲಕ ಮಾತಾಡಿದ ಅವರು ಬುಡಕಟ್ಟು ಕಾಡುಗೊಲ್ಲ ಸಮಾಜ ಅತ್ಯಂತ ಹಿಂದುಳಿದಿರುವ ಸಮಾಜವಾಗಿದೆ. ಹಟ್ಟಿಗಳು ಹಿಂದುಳಿದಿದ್ದು ಈ ಸಮಾಜ ಅನಾಕರಿಕತೆಯಿಂದ ಕೂಡಿದೆ. ಈ ಸಮಾಜದಲ್ಲಿ ಮೀಸಲಾತಿ ಪಡೆಯುವಂತಹ ಎಲ್ಲ ಅರ್ಹತೆಗಳು ಇದಾವೆ. ಕಾಡುಗೊಲ್ಲರು ಪ್ರತ್ಯೇಕ ಹಟ್ಟಿಗಳಲ್ಲಿ ವಾಸಿಸುತ್ತಾ, ಇತರೆ ಸಮಾಜದಿಂದ ದೂರ ಉಳಿದಿರುವುದು ಹಾಗೂ ತನ್ನದೇ ಆದ ಭಾಷೆಯನ್ನು ಹೊಂದಿರುವ ಈ ಸಮಾಜಕ್ಕೆ ಮೀಸಲಾತಿ ಅವಶ್ಯಕತೆ ಇದೆ ಎಂದರು. ಕಾಡುಗೊಲ್ಲರು ಅತ್ಯಂತ ಹಿಂದುಳಿದವರಾಗಿದ್ದು, ಇವರನ್ನು ಮಂದೆ ತರುವ ಕೆಲಸ ಊರುಗೊಲ್ಲ ಮಾಡಬೇಕು ಎಂದರು.
ನಂತರ ಕವಯಿತ್ರಿ ಹೆಚ್.ಎಲ್. ಪುಷ್ಪ ಮಾತಾನಾಡಿ ಗೋವು ಮತ್ತು ಕುರಿಗಳನ್ನು ಪಶುಪಾಲನೆ ಮಾಡಿಕೊಂಡು ಬಂದಿರುವ ಕಾಡುಗೊಲ್ಲ ಸಮಾಜದ ಹಿಂದುಳಿದೆ. ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಕಾಡುಗೊಲ್ಲರು ಕಲೆಯಲ್ಲಿ ಶ್ರೀಮಂತಿಕೆ ಹೊಂದಿರುವ ಸಾಮಾಜವಾಗಿದೆ. ಬಹುತೇಕ ಕಾಡುಗೊಲ್ಲರು ಹಿಂದುಳಿದಿದ್ದು, ಕೆಲವು ಆಚರಣೆಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಹೋರಾಟದ ಮೂಲಕ ನಿಮ್ಮ ಮೀಸಲಾತಿಯನ್ನು ಪಡೆದುಕೊಳ್ಳಿ ನಾನು ನಿಮಗೆ ಸಹಕಾರ ನೀಡುತ್ತೆನೆ ಎಂದು ಹೇಳಿದರು. ಸಮಾಜ ಸೇವಕ ಜಯರಾಂ, ಸಾಹಿತಿ ಬಂಜಗೆರೆ ಜಯಪ್ರಕಾಶ್ ಸೇರಿದಂತೆ ಮತ್ತಿತರರು ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ. ಶಿವು ಯಾದವ್ ವಹಿಸಿದ್ದರು. ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ಕವಯಿತ್ರಿ ಡಾ. ಹೆಚ್.ಎಲ್. ಪುಷ್ಪ, ಡಾ. ದೊಡ್ಡಮಲ್ಲಯ್ಯ, ವೆಂಕಟೇಶಯ್ಯ, ಲಕ್ಷ್ಮೀಕಾಂತ್, ಸಮಾಜ ಸೇವಕ ಮಾಗಡಿ ಜಯರಾಂ, ಏನ್.ಆರ್. ಲಕ್ಷ್ಮೀಕಾಂತ್, ಜಯಲಕ್ಷ್ಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು