ಕಾಡುಗೊಲ್ಲರಿಗೆ ಟಿಕೆಟ್ ನೀಡಿ, ಇಲ್ಲವಾದರೆ ಮತದಾನ ಬಹಿಷ್ಕಾರ..!

ಶಿರಾ : ಕಾಡುಗೊಲ್ಲರ ಸಮುದಾಯಕ್ಕೆ ಸೇರಿದ ಡಾ.ಶಿವಕುಮಾರ್ ಗೆ ಬಿಜೆಪಿ ಟಿಕೆಟ್ ನೀಡಬೇಕು.ಬೇರೆಯವರಿಗೆ ಟಿಕೆಟ್ ನೀಡಿದರೆ ಗೊಲ್ಲರ ಹಟ್ಟಿಗೆ ಪ್ರವೇಶವಿಲ್ಲ ಎಂದು ತಾಲ್ಲೂಕಿನ ತೊಗರಿಗುಂಟೆಯ ಗೊಲ್ಲರ ಹಟ್ಟಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. ತಾಲ್ಲೂಕಿನಲ್ಲಿ 40 ಸಾವಿರಕ್ಕೂ ಹೆಚ್ಚು ಕಾಡುಗೊಲ್ಲರ ಸಮುದಾಯವಿದೆ. ಬಿಜೆಪಿ ಸರ್ಕಾರ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ನಮ್ಮನ್ನು ಗುರುತಿಸಿದೆ.ಆದ್ದರಿಂದ ರಾಜಕೀಯ ಜನ್ಮ ನೀಡಬೇಕೆಂದು ಕಾಡುಗೊಲ್ಲರ ಸಮುದಾಯದ ಮುಖಂಡರು ಬಿಜೆಪಿ ಪಕ್ಷವನ್ನು ಒತ್ತಾಯಿಸಿದರು.ರಾಜ್ಯ ಕಾಡುಗೊಲ್ಲರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಮಾತನಾಡಿ, ಮೂರು ಪಕ್ಷಗಳಿಂದ ಕಾಡುಗೊಲ್ಲರಿಗೆ ಟಿಕೆಟ್ ನೀಡಬೇಕು.ಬಿಜೆಪಿ ವತಿಯಿಂದ ಕಾಡುಗೊಲ್ಲರ ಸಮುದಾಯದ ಬಗ್ಗೆ ಸಂಶೋಧನೆ ನಡೆಸಿ, ಪಿಎಚ್ ಡಿ ಪಡೆದಿರುವ ಡಾ.ಶಿವಕುಮಾರ್ ಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದರು.

ತಾಲ್ಲೂಕು ಮುದ್ದುಕೃಷ್ಣ ಯಾದವ ವಿದ್ಯಾರ್ಧಕ  ಸಂಘದ ಕಾರ್ಯದರ್ಶಿ ಕೆ.ಕೃಷ್ಣಪ್ಪ ಮಾತನಾಡಿ, ಕಾಡುಗೊಲ್ಲರ ಸಮುದಾಯಕ್ಕೆ ಯಾವ ಪಕ್ಷದಿಂದ ಟಿಕೆಟ್ ನೀಡಿಲ್ಲ.ಕಾಡುಗೊಲ್ಲ ಸಮುದಾಯ ಸಾಕಷ್ಟು ಸಂಖ್ಯೆಯಲ್ಲಿ ಇದ್ದರೂ ಕೂಡ ನಮಗೆ ಟಿಕೆಟ್ ನೀಡದೆ ಅನ್ಯಾಯ ಮಾಡುತ್ತಿದ್ದಾರೆ. ನಮ್ಮ ಸಮುದಾಯದ ಡಾ.ಶಿವಕುಮಾರ್ ಗೆ ಟಿಕೆಟ್ ನೀಡಿದರೆ, ಶಿರಾ ಕ್ಷೇತ್ರದ ಎಲ್ಲಾ ಗೊಲ್ಲರ ಹಟ್ಟಿಯ ಸಮುದಾಯದವರು ಒಟ್ಟಾಗಿ ನಮ್ಮ ಸಮುದಾಯದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದರು.ದಾಸಣ್ಣ ,ಕಂಬಕ್ಕ ,ತಿಮ್ಮಕ್ಕ , ರಾಮಣ್ಣ, ನಾಗಣ್ಣ ,ಜಿಂಜಪ್ಪ ,ಮೂಡ್ಲಪ್ಪ , ಮಂಜಣ್ಣ ಕರಿಯಣ್ಣ ಹಾಗೂ ಗ್ರಾಮಸ್ಥರು ಇದ್ದರು.

Leave a Reply

Your email address will not be published.

Send this to a friend