ಬಳ್ಳಾರಿ : ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಬೆಳೆ ನಷ್ಟ ಕುರಿತಾದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶೀಘ್ರದಲ್ಲೇ ಸಲ್ಲಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಇಂದು ಬಳ್ಳಾರಿಯ ಜಿಂದಾಲ್ ಏರ್ಪೋರ್ಟ್ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ವಿಜಯಪುರ, ಯಾದಗಿರಿ, ಕಲಬುರುಗಿಯಲ್ಲಿ ವೈಮಾನಿಕ ಸಮೀಕ್ಷೆ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು
ಆ ಭಾಗದಲ್ಲಿ ಏನೇನು ಹಾನಿಯಾಗಿದೆ ಎಂಬುದರ ಕುರಿತು ವರದಿ ಪಡೆಯಲಿದ್ದೇನೆ. ಮನೆ ಕಳೆದುಕೊಂಡವರ ಮಾಹಿತಿ ಜೊತೆಗೆ ಬೆಳೆ ಹಾನಿ ಬಗ್ಗೆಯೂ ಮಾಹಿತಿ ಪಡೆಯುವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸುರಿದ ಮಹಾಮಳೆಯಿಂದಾದ ಬೆಳೆ ನಷ್ಟದ ಕುರಿತು ಪಿಎಂ ಬಳಿ ಹತ್ತಿರ ಈಗಾಗಲೇ ಮಾತಡಲಾಗಿದೆ. ಕರ್ನಾಟಕದಲ್ಲಿ ಮಳೆಯಿಂದ ಹಾನಿಗೀಡಾದ ಬೆಳೆ ನಷ್ಟದ ವರದಿ ಕೊಟ್ಟ ಮೇಲೆ ಕೇಂದ್ರದ ತಂಡ ರಾಜ್ಯಕ್ಕೆ ಬರಲಿದೆ ಎಂದು ಸಿಎಂ ಬಿಎಸ್ವೈ ಮಾಹಿತಿ ನೀಡಿದರು.