ಮಂಡ್ಯ : ಅರ್ಕೇಶ್ವರ ದೇವಾಲಯದಲ್ಲಿ ಮೂವರು ಅರ್ಚಕರನ್ನು ಹತ್ಯೆಗೈದು ದೇವಾಲಯದ ಹುಂಡಿ ಚಿನ್ನ ಬೆಳ್ಳಿಯನ್ನು ದೋಚಿ ಪರಾರಿಯಾದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ದೇವಾಲಯದ ಅರ್ಚಕರಾದ ಗಣೇಶ(55), ಪ್ರಕಾಶ(58) ಮತ್ತು ಆನಂದ(40) ಕೊಲೆಯಾದವರು. ಇವರು ಅರ್ಚಕ ವೃತ್ತಿಯ ಜೊತೆಗೆ ರಾತ್ರಿ ಪಾಳಿಯಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಕಳೆದ ಎಂಟು ತಿಂಗಳಿಂದ ಗುಂಡಿಯನ್ನು ಒಡೆದು ಹಣ ಹಂಚಿಕೆ ಮಾಡದ ಪರಿಣಾಮ ಗುಂಡಿಯನ್ನು ಹೊತ್ತೊಯ್ದು ಬೆಳ್ಳಿ ಚಿನ್ನವನ್ನು ಕಳ್ಳರು ಹೊತ್ತೊಯ್ದಿದ್ದಾರೆ ಎಂದು ಹೇಳಲಾಗಿದೆ .
ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .