ನಮ್ಮೂರಿಗೆ ಮದ್ಯದಂಗಡಿ ಬೇಡ, ಮಸ್ಕಲ್ ಗ್ರಾಮದ ಯುವಕರ ಒತ್ತಾಯ.

ಹಿರಿಯೂರು : ನಮ್ಮೂರಿನಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬೇಡಿ ಎಂದು ಮಸ್ಕಲ್ ಗ್ರಾಮದ 20 ಕ್ಕೂ ಹೆಚ್ಚು ಯುವಕರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಹಿರಿಯೂರು ನಗರದ ಹುಳಿಯಾರು ರಸ್ತೆಯಲ್ಲಿರುವ ಬಾರ್ ಒಂದನ್ನು ಮಸ್ಕಲ್ ಗ್ರಾಮದಲ್ಲಿ ಪ್ರಾರಂಭಿಸಲು ಅಬಕಾರಿ ಇಲಾಖೆ ಅಧಿಕಾರಿಗಳು ಅನುಮತಿ ನೀಡಿರುವ ವಿಷಯ ತಿಳಿದ ಯುವಕರು ಯಾವುದೇ ಕಾರಣಕ್ಕೂ ನಮ್ಮ ಊರಿನಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು. ಒಂದು ವೇಳೆ ಅಧಿಕಾರಿಗಳು ಅವಕಾಶ ನೀಡುವುದು ಮುಂದಾದಲ್ಲಿ ಮಹಿಳೆಯರು, ಮಕ್ಕಳು, ಗ್ರಾಮಸ್ಥರು ಇಲಾಖೆ ಮುಂದೆ ಉಗ್ರ ಹೋರಾಟ ಮೂಲಕ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಯುವಕರು ಅಬಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಗ್ರಾಮ ಹಿಂದುಳಿದಿರುವ ಒಂದು ಗ್ರಾಮವಾಗಿದೆ. ಈ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕುಟುಂಬಗಳು ಹೆಚ್ಚಿವೆ. ಬಿಡ್ತೀನಿ, ನಿರುದ್ಯೋಗ ಸಮಸ್ಯೆ ಎದ್ದು ಕಾಣುತ್ತಿದೆ. ಅದರಲ್ಲೂ ಉದ್ಯೋಗ ಹರಿಸಿ ಬೆಂಗಳೂರಿಗೆ ಹೋಗಿದ್ದವರು ಕೋರೊನಾ ಹೊಡೆತಕ್ಕೆ ಸಿಲುಕಿ ಕೆಲಸ ಕಳೆದುಕೊಂಡು ಯುವಕರು ಕೆಲಸವಿಲ್ಲದೆ ಮನೆಯಲ್ಲಿದ್ದಾರೆ. ಈಗಾಗಲೇ ಗ್ರಾಮ ಅಭಿವೃದ್ಧಿ ಕಾಣದೆ ಹಿಂದುಳಿದಿದೆ. ಗ್ರಾದಲ್ಲಿರುವವರಿಗೆ ಕೆಲಸವಿಲ್ಲ, ನಮ್ಮ ಗ್ರಾಮವನ್ನು ಮದ್ಯಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂಬುದು ಯುವರಕರ ಕನಸಾಗಿದೆ. ನೀವು ಬಾರ್ ಅಂಗಡಿ ಪ್ರಾರಂಭಿಸಿದರೆ ಕುಡಿಯುವವರ ಸಂಖ್ಯೆ ಹೆಚ್ಚುತ್ತದೆ. ಈಗಾಗಲೇ ಗ್ರಾಮದಲ್ಲಿ ಕುಡಿತದ ಚಟದಿಂದ ಸಾಕಷ್ಟು ತೊಂದರೆಯಾಗಿದೆ. ಮತ್ತೊಷ್ಟು ತೊಂದರಯಾಗುವುದು ಬೇಡ, ಬೇರೆ ಎಲ್ಲಾದರೂ ಅವಕಾಶ ಕೊಡಿ, ನಮ್ಮೂರಲ್ಲಿ ಬೇಡ ಎಂದು ಅಬಕಾರಿ ಅಧಿಕಾರಿಗಳಿಗೆ ಯುವಕರು ಆಗ್ರಹಿಸಿದರು.

ಇದಲ್ಲದೆ ತಹಶೀಲ್ದಾರ್ ನವರಿಗೂ ಸಹ ಮನವಿ ಮಾಡಿದ್ದಾರೆ.
ಕರುನಾಡು ಸೇನೆಯ ಜಿಲ್ಲಾಧ್ಯಕ್ಷ ವಿ.ಎಲ್. ಗೌಡ್ರು, ಪತ್ರಕರ್ತ ಚಿದಾನಂದ್ ಮಸ್ಕಲ್, ರಂಗನಾಥ್, ಮಣಿಕಂಠ, ಪ್ರಸನ್ನ ಕುಮಾರ್, ವಿರೇಶ , ರಘು, ನಿಂಗರಾಜು, ಧನಂಜಯ, ಕುಮಾರ್, ಮಾರುತಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published.

Send this to a friend