‘‘ಜ್ಯೂನಿಯರ್​ ಚಿರುಗೆ ” ಜನ್ಮ ನೀಡಿದ ಮೇಘನಾ.

ಬೆಂಗಳೂರು : ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್​ ಸರ್ಜಾಗೆ ಗಂಡು ಮಗು ಜನನವಾಗಿದೆ. ಈಗಾಗಲೇ ಸರ್ಜಾ ಫ್ಯಾಮಿಲಿ ಹಾಗೂ ಮೇಘನಾ ರಾಜ್​ ಫ್ಯಾಮಿಲಿ ಆಸ್ಪತ್ರೆಯಲ್ಲಿ ಮೇಘನಾ ಹಾಗೂ ಮಗುವಿನ ಜೊತೆಗಿದ್ದಾರೆ. ಸದ್ಯ, ಆಸ್ಪತ್ರೆಯಲ್ಲಿ ಚಿಕ್ಕಪ್ಪ ಧ್ರುವ ಸರ್ಜಾ ಅಣ್ಣನ ಮಗುವನ್ನ ಕೈಗೆತ್ತಿಕಂಡಿದ್ದಾರೆ.

ಮಗುವನ್ನ ಕೈಗೆತ್ತಿಕೊಮಡಿರುವ ಆ ಸಂಭ್ರಮ, ಆ ತೃಪ್ತಿ ಧ್ರುವ ಕಣ್ಣಲ್ಲಿ ಕಂಡು ಬರ್ತಿದೆ. ಧ್ರುವ ಜೊತೆಗಿರುವ ಮೇಘನಾ ತಾಯಿ ಪ್ರಮಿಳಾ ಜೋಶಾಯಿಯವರಲ್ಲೂ ಅದೇ ಭಾವ. ಚಿರು ಸರ್ಜಾ ಗೆಳೆಯನ ಆಸ್ಪತ್ರೆ, ಅಕ್ಷ ಆಸ್ಪತ್ರೆಯಲ್ಲಿ ಚಿರು ಮಗುವಿನ ಜನನವಾಗಿದೆ. ಸರ್ಜಾ ಹಾಗೂ ಸುಂದರ್​ ರಾಜ್​ ಕುಟುಂಬಗಳು ಮಾತ್ರವಲ್ಲದೇ, ಇಡೀ ಕರ್ನಾಟಕದಾದ್ಯಂತ ಸಂಭ್ರಮ, ಸಂತೋಷ ಮನೆಮಾಡಿದೆ.
ಜ್ಯೂನಿಯರ್ ಚಿರು ಆಗಮನದಿಂದ ಆಸ್ಪತ್ರೆ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು, ಜೊತೆಗೆ ಸಿಹಿ ಹಂಚಿ ಸಂಭ್ರಮಿಸಿದರು.

Leave a Reply

Your email address will not be published.

Send this to a friend