ಹಿರಿಯೂರು : ಇದೆ ತಿಂಗಳ 28 ರಂದು ನಡೆಯಲಿರುವ ಐದು ಜಿಲ್ಲೆಗಳ 38 ತಾಲೂಕುಗಳನ್ನೊಳಗೊಂಡ ವಿಧಾನಪರಿಷತ್ ಆಗ್ನೇಯ ಪದವಿಧರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು ವಕೀಲ ಪಿ.ಆರ್. ದಾಸ್ ಪಕ್ಷೇತರ ಅಭ್ಯರ್ಥಿಯಾಗಿ ಬೆಂಗಳೂರಿನ ಶಾಂತಿನಗರದ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಇತ್ತ ಬಿಜೆಪಿ ಪಕ್ಷದಿಂದ ಟಿಕೆಟ್ ವಂಚಿತವಾಗಿದ್ದ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಪತಿ, ಡಿ.ಟಿ. ಶ್ರೀನಿವಾಸ್ ಪಕ್ಷಕ್ಕೆ ಸೆಡ್ಡು ಹೊಡೆದು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಚುನಾವಣ ಅಖಾಡಕ್ಕೆ ಧುಮುಕಿದ್ದಾರೆ. ಡಿ.ಟಿ. ಶ್ರೀನಿವಾಸ್ ನವರನ್ನು ಸೋಲಿಸಲು ವಕೀಲ ಪಿ.ಆರ್. ದಾಸ್ ನಾಮಪತ್ರ ಸಲ್ಲಿಸಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ.
ಕಾಂಗ್ರೆಸ್ ಪಕ್ಷದಿಂದ ರಮೇಶ್ ಬಾಬು, ಜೆಡಿಎಸ್ ಅಭ್ಯರ್ಥಿಯಾಗಿ ಚೌಡರೆಡ್ಡಿ ತೂಪಲ್ಲಿ, ಬಿಜೆಪಿ ಪಕ್ಷದಿಂದ ಎಂ. ಚಿದಾನಂದ ಗೌಡ, ಪಕ್ಷೇತರ ಅಭ್ಯರ್ಥಿಯಾಗಿ ಡಿ.ಟಿ. ಶ್ರೀನಿವಾಸ್, ಡಾ. ಹಾಲನೂರು ಎಸ್ ಲೇಪಾಕ್ಷಿ ನಾಮಪತ್ರ ಸಲ್ಲಿಸಿದ್ದಾರೆ.