ಚಿತ್ರದುರ್ಗ : ನನಗೆ ಚಿತ್ರ ನಟರು ಪರಿಚಯ, ಆಗಂತ ನಾನು ಪಬ್ ಗೆ ಹೋಗಿದ್ದೇನಾ ಎಂದು ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಪ್ರಶ್ನೆಸಿದ್ದಾರೆ. ಚಿತ್ರದುರ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಶ್ರೀಮಂತರು ದುಡ್ಡು ಇರುವವರೇ ಡ್ರಗ್ಸ್ ತೆಗೆದುಕೊಳ್ಳುವುದು, ಯಾರೇ ಬಲಿಷ್ಟರಿದ್ದರು ಸಿಎಂ ಹೇಳಿದ್ದಾರೆ ಅಂತವರನ್ನು ಬಿಡುವುದಿಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ ಎಂದರು. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಮಂದಿಯನ್ನ ಅರೆಸ್ಟ್ ಮಾಡಿದ್ದಾರೆ. ಸರ್ಕಾರ ದಿಟ್ಟತನದ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದರು. ಯಾರೂ ಕೂಡಾ ಡ್ರಗ್ಸ್ ವಿಚಾರಕ್ಕೆ ಒತ್ತಡ ಹಾಕಲ್ಲ, ಎಲ್ಲರೂ ಪಕ್ಷಾತೀತವಾಗಿ ಸಪೋರ್ಟ್ ಮಾಡುತ್ತೇವೆ. ರಾಜಕಾರಣಿಗಳು ಯಾರೂ ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ, ನಾನು ಕಿಲ್ಲಿಂಗ್ ವೀರಪ್ಪನ್ ಚಿತ್ರದ ನಿರ್ಮಾಪಕ ಎಂದು ರಘು ಆಚಾರ್ ತಿಳಿಸಿದರು. ನನಗೆ ಚಿತ್ರ ನಟರು ಪರಿಚಯ, ಆಗಂತ ನಾನು ಪಬ್ ಗೆ ಹೋಗಿದ್ದೇನಾ ಎಂದು ಪ್ರಶ್ನಿಸಿದರು.
ರಾಗಿಣಿ, ಸಂಜನಾ, ಶಿವಪ್ರಕಾಶ್ ಬಂಧನವಾಗಿದೆ. ಆಗಂತ ಅವರೊಟ್ಟಿಗೆ ಪಬ್ ಗೆ ಹೋಗಿರುತ್ತೀವಾ ?.ಎಂದು ಮಾಧ್ಯಮಗಳಿಗೆ ಪ್ರಶ್ನೆ ಹಾಕಿದರು. ಚುನಾವಣಾ ಪ್ರಚಾರ ವೇಳೆ ಪಕ್ಷಾತೀತವಾಗಿ ಪರ ವಹಿಸಿ ಪ್ರಚಾರ ಮಾಡಿರುತ್ತಾರೆ. ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಪರ, ಇನ್ನೊಂದು ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿರುತ್ತಾರೆ ಎಂದರು.ಆಗಂತ ಇದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ, ಯಾರೇ ತಪ್ಪು ಮಾಡಿದ್ದರು ಅವರನ್ನ ಮಟ್ಟ ಹಾಕಲಿ, ಈ ವ್ಯವಸ್ಥೆ ಹೀಗೆ ಮುಂದೆ ಸಾಗಲಿ, ಒಳ್ಳೆಯ ಹೆಜ್ಜೆಯಲ್ಲಿ ಸಾಗುತ್ತಿದೆ ಎಂದು ಹೇಳಿದರು. ಪಕ್ಷಾತೀತವಾಗಿ ನಾವೆಲ್ಲರೂ ಅವರ ಜೊತೆಗೆ ಇರುತ್ತೇವೆ. ಬಿಜೆಪಿ ಪರ ನಾನು ಸಾಪ್ಟ್ ಕಾರ್ನರ್ ಹೊಂದಿಲ್ಲ, ಹಾಗೂ ನಾನು ಬಿಜೆಪಿ ಸೇರಿವ ಪ್ರಶ್ನೆ ಇಲ್ಲ, ನಾನು MLC ಆಗಿ ಕಾಂಗ್ರೆಸ್ ನಲ್ಲಿ ಚೆನ್ನಾಗಿ ಇದ್ದೇನೆ ಎಂದರು.
ಜಮೀರ್ ಆಗಲಿ ನಾನಗಲಿ ಚಿತ್ರನಟರ ಜೊತೆ ಚೆನ್ನಾಗಿ ಇರುವುದು ತಪ್ಪಾ.? ತಪ್ಪು ಯಾರೇ ಮಾಡಿದ್ದರೂ ತಪ್ಪೆ, ನಾನಗಲಿ, ಜಮೀರ್ ಆಗಲಿ ತಪ್ಪು ಮಾಡಿದರೆ ತಪ್ಪೆ ಎಂದು ಹೇಳಿದರು. A1 ಆರೋಪಿಯಿಂದ ನಾನು ಕಿಲ್ಲಿಂಗ್ ವೀರಪ್ಪನ್ ಚಿತ್ರಕಥೆ ಖರೀದಿಸಿ ಚಿತ್ರ ನಿರ್ಮಾಣ ಮಾಡಿದ್ದೆ, ನನಗೂ ಅವರಿಗೂ ಪರಿಚಯವೇ ಇರಲಿಲ್ಲ. ನಾನೂ ಕ್ಯಾಸಿನೋಗೆ ಜೀವನದಲ್ಲಿ ಒಂದು ಬಾರಿ ಮಾತ್ರ ಹೋಗಿದ್ದೆ ಅಷ್ಟೇ ನನಗೆ ಆಡೋಕೆ ಬರಲ್ಲ, ಹೇಗಿದೆ ಎಂದು ನೋಡಲು ಹೋಗಿದ್ದೆ ಎಂದರು. ಕ್ಯಾಸಿನೊ ದಲ್ಲಿ ಬಟನ್ ಒತ್ತಬೇಕು ನಮಗೆ ಅದು ಬರಲ್ಲ ನೋಡಲು ಹೋಗಿ ನೋಡಿ ನಂತರ ವಾಪಸ್ ಬಂದೆ. ಆಸ್ಟ್ರೇಲಿಯಾದಲ್ಲಿ ಕ್ಯಾಸಿನೋಗೆ ಹೋಗಿದ್ದೆ, ನನಗೆ ಜೂಜಾಡುವ ಅಭ್ಯಾಸ ಇಲ್ಲ. ಜಮೀರ್ ಹೆಸರು ಬಂದ ಬಳಿಕ ಅವರು ಇದ್ದಾರೆ ಎಂದು ಹೇಳಲು ಆಗುತ್ತಾ ?. ಜಮೀರ್ ಅವರೇ ಅದಕ್ಕೆ ಉತ್ತರ ನೀಡಬೇಕು, ಪೊಲೀಸರು ತನಿಖೆ ಮಾಡುತ್ತಿದ್ದಾರೆ.20 ಜನ ಸಿನಿಮಾ ನಟರು ಪರಿಚಯ ಇದ್ದಾರೆ, ಆಗಂತ ಅವರ ಜೊತೆ ಹೋಗಿದ್ದೆ ಎಂದು ಹೇಳಲು ಸಾಧ್ಯನ ಎಂದರು. ಯಾರೇ ಡ್ರಗ್ಸ್ ತೆಗೆದುಕೊಂಡಿದ್ದಾರೆ ಎಲ್ಲರೂ ದುಡ್ಡಿರುವ ಶ್ರೀಮಂತರ ಮಕ್ಕಳು ಇದರಿಂದ ಸಿಎಂ ಹಾಗೂ ಗೃಹ ಮಂತ್ರಿಗಳ ಜೊತೆ ವಿರೋಧ ಪಕ್ಷದವರು ನಿಂತಿದ್ದಾರೆ. ಮುಂಬರುವ ಪೀಳಿಗೆಗೆ ಇದರಿಂದ ಮಾರಕವಾಗದಂತೆ ಮಟ್ಟ ಹಾಕಬೇಕು. ಪೊಲೀಸರಿಗೆ ಗೊತ್ತಿಲ್ಲದೆ ಇದು ಇಷ್ಟು ವರ್ಷ ನಡೆದುಕೊಂಡು ಬಂದಿಲ್ಲ, ಬಾಂಬೆಯಿಂದ ಇಲ್ಲಿವರೆಗೂ ಬಂದಿದೆ, ಇನ್ನೂ ಎಲ್ಲಿ ಹೋಗುತ್ತೋ ಗೊತ್ತಿಲ್ಲ ಎಂದು ಹೇಳಿದರು.
ಸಿಸಿಬಿ ಕೈಯಲ್ಲಿ ಆಗಿಲ್ಲ ಎಂದರೇ; ಸಿಬಿಐಗೆ ನೀಡಲಿ ಬಿಡ: ಎಲ್ಲಾ ರಾಜ್ಯದಲ್ಲಿ ತನಿಖೆ ನಡೆಸಬಹುದು. ರಾಜ್ಯ ಗುಪ್ತಚರ ಇಲಾಖೆಯ ವೈಪಲ್ಯ ಎಂದರು. ಸರ್ಕಾರಕ್ಕೆ ಗೊತ್ತಿಲ್ಲದೆ ಏನೂ ಮಾಡಲು ನಡೆದಿಲ್ಲ, ನಮ್ಮ ಸರ್ಕಾರದ ಅವಧಿಯಲ್ಲಿ ಡ್ರಗ್ಸ್ ಇರಲಿಲ್ಲ ಎಂದು ಹೇಳಲು ಸಾಧ್ಯನಾ..? ಎಂದರು.
ಎಲ್ಲರ ಸರ್ಕಾರದ ಅವಧಿಯಲ್ಲಿ ಕೂಡಾ ಡ್ರಗ್ಸ್ ಇತ್ತು . ಈಗ ಅದರ ಟೈಂ ಕೆಟ್ಟಿದೆ ಇದು ವಾಸ್ತವ, ಇವರ ಪರ ಮಾತನಾಡುವವರನ್ನ ಜನ ಕ್ಷಮಿಸಬಾರದು ಎಂದರು.