ತುಮಕೂರು : ಮಧ್ಯ ಕರ್ನಾಟಕದಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಬುಡಕಟ್ಟು ಸಮುದಾಯಗಳಲ್ಲಿ ಒಂದಾದ ಕಾಡುಗೊಲ್ಲ ಸಮಾಜವು ಒಂದಾಗಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳವರಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಕಾಡುಗೊಲ್ಲರ ಆರಾಧ್ಯದೈವ ಶ್ರೀ ಜುಂಜಪ್ಪ ಸ್ವಾಮಿಯ ಸಂಸ್ಕೃತಿ ಪರಿಷತ್ತಿಗೆ ಭೂ ಮಂಜೂರು ಮಾಡುವಂತೆ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಸುಮಾರು 28 ಲಕ್ಷಕ್ಕೂ ಕಾಡುಗೊಲ್ಲರಿದ್ದು ಶಿರಾ ತಾಲೂಕಿನ ಕಳವರಹಳ್ಳಿ ಗ್ರಾಮದ ಸರ್ವೆ ನಂಬರ್ 75 ರಲ್ಲಿ ಮೂಲ ಶ್ರೀ ಜುಂಜಪ್ಪಸ್ವಾಮಿ ಅನಾದಿಕಾಲದಿಂದಲೂ ನೆಲೆಗೊಂಡಿರುವ ಸ್ಥಳವಾಗಿರುತ್ತದೆ. ಈ ಸ್ಥಳವು ಸರ್ಕಾರಿ ಗೋಮಾಳ ಭೂಮಿಯಾಗಿದ್ದು ಈ ಕಾಡುಗೊಲ್ಲ ಸಮುದಾಯವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದ ವರ್ಗವಾಗಿದ್ದು ಈ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ತಾವು ಕಳೆದ ಬಾರಿ ಹೇಳಿರುವಂತೆ ಶ್ರೀ ಜುಂಜಪ್ಪ ಸ್ವಾಮಿ ಯ ಸಾಂಸ್ಕೃತಿಕ ಸ್ಥಾಪಿಸುವುದಾಗಿ ಭರವಸೆ ಕೊಟ್ಟಿದ್ದೀರಿ. ಈ ಸಂದರ್ಭದಲ್ಲಿ ತಾವು ಜಮೀನು ಮಂಜೂರು ಮಾಡಿದ್ದಲ್ಲಿ ಸುಮಾರು 10 ಕೋಟಿ ರೂ ವೆಚ್ಚದಲ್ಲಿ ” ಶ್ರೀ ಗಿರಿಧಾರಿ ಗೋವರ್ಧನ ಟ್ರಸ್ಟ್” ಮತ್ತು ” ಪಿಜಿಕೆ ಸಲೂಷನ್ ಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್” ವತಿಯಿಂದ ಶ್ರೀ ಜುಂಜಪ್ಪಸ್ವಾಮಿ ಭವ್ಯ ಮಂದಿರ ಹಾಗೂ ಸ್ವಾಮಿಯ 36 ಅಡಿ ಏಕಶಿಲಾ ಮೂರ್ತಿ ನಿರ್ಮಾಣ ಮಾಡಲು ಮುಂದಾಗಿದ್ದು ಭವ್ಯಕರ್ನಾಟಕದ ಪರಂಪರೆಯ ವಿಶಿಷ್ಟ ವೈವಿಧ್ಯಮಯ ಸಂಸ್ಕೃತಿ ನಮ್ಮ ಕಾಡುಗೊಲ್ಲ ಸಮುದಾಯವಾಗಿದ್ದು ಮಾನ್ಯ ಮುಖ್ಯಮಂತ್ರಿಗಳಾದ ತಾವು ಸಂಭೂತರು, ಆಧ್ಯಾತ್ಮಿಕ ಹಿನ್ನೆಲೆಯುಳ್ಳವರು, ಕೊಡುಗೈದಾನಿ ಯಾದ ತಾವುಗಳು ಈ ಜಮೀನನ್ನು ಮಂಜೂರು ಮಾಡಿ ಕಾಡುಗೊಲ್ಲ ಸಮುದಾಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ, ಸಮುದಾಯವು ಇತಿಹಾಸದಲ್ಲಿ ಸ್ಮರಿಸುತ್ತದೆ ಎಂದು ಮನವಿ ಮಾಡಿಕೊಳ್ಳುತ್ತೇನೆ. ಎಂದು ಪತ್ರದ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪ ನವರಿಗೆ ಪತ್ರದ ಮೂಲಕ ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಮನವಿ ಮಾಡಿದ್ದಾರೆ