ಚಿತ್ರದುರ್ಗ : ಗುತ್ತಿಗೆದಾರನಿಂದ 2 ಲಕ್ಷ ಲಂಚ ಪಡೆಯುವ ವೇಳೆಯಲ್ಲಿ ತಹಶೀಲ್ದಾರ್ ಹಾಗೂ ಆರ್.ಐ. ಎಸಿಬಿ ಬೆಲೆಗೆ ಬಿದ್ದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಹಶೀಲ್ದಾರ್ ಮಲ್ಲಿಕಾರ್ಜುನ್ ಹಾಗೂ ಆರ್.ಐ. ಉಮೇಶ್ ಎಸಿಬಿ ಬೆಲೆಗೆ ಬಿದ್ದಿರುವ ಅಧಿಕಾರಿಗಳು.
ಮೊಳಕಾಲ್ಮೂರು ಪಟ್ಟಣದ ಕಚೇರಿಯಲ್ಲಿ ಎಸಿಬಿ ಎಸ್ಪಿ ಜಯಪ್ರಕಾಶ್ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. ದಾಳಿ ಮಾಡುವ ವೇಳೆ ತಹಶೀಲ್ದಾರ್ ಹಾಗೂ ಆರ್. ಐ. ಅಧಿಕಾರಿ ಇಬ್ಬರು ಸೇರಿ ಗುತ್ತಿಗೆದಾರ ಪ್ರೀತಮ್ ಬಳಿ 2ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಸ್ವೀಕರಿಸುವ ವೇಳೆ ಈ ಇಬ್ಬರನ್ನಾ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ತಹಶೀಲ್ದಾರ್ ಹಾಗೂ ಆರ್.ಐ. ಇವರಿಬ್ಬರು ರಸ್ತೆ ನಿರ್ಮಾಣ ಗುತ್ತಿಗೆದಾರ ಪ್ರೀತಮ್ ಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ತಿಳಿದು ಬಂದಿದೆ.